ಬೆಂಗಳೂರು: ನಗರದ ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೆಲ್ತ್ ಸಿಟಿಗೆ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭೇಟಿ ನೀಡಿದ್ದಾರೆ.
ಭೇಟಿಯ ಬಳಿಕ ಹೃದಯಾಲಯದ 100 ಐಸಿಯು ಬೆಡ್ ಉದ್ಘಾಟನೆ ಮಾಡಿದ್ದಾರೆ. 100 ಬೆಡ್ ಸಾಮಥ್ರ್ಯದ ಕೋವಿಡ್ ಆಸ್ಪತ್ರೆ ಇದಾಗಿದ್ದು, ಡಾ. ದೇವಿ ಶೆಟ್ಟಿ ಮಾಲೀಕತ್ವದ ನಾರಾಯಣ ಹೆಲ್ತ್ ಸಿಟಿ ಇದಾಗಿದೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು
Advertisement
Advertisement
ಈಚೆಗೆ ಗಂಗೂಲಿಯವರಿಗೆ ಹೃದಯಾಘಾತವಾಗಿತ್ತು. ಕೆಲ ದಿನಗಳ ಕಾಲ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಡಿಸ್ಚಾರ್ಜ್ ಆಗಿದ್ದರು. ಆಗಾಗ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಾರಾಯಣ ಹೃದಯಾಲಯ ಆಸ್ಪತ್ರೆಯ ನಾಲ್ಕನೆ ಮಹಡಿಯಲ್ಲಿ ಸೌರವ್ ಗಂಗೂಲಿ ಅವರಿಗೆ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
Advertisement
Advertisement
ಕಾರ್ಡಿಯಾಕ್ ಸ್ಪೆಷಲಿಸ್ಟ್ ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ ದಾದಾ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಕಳೆದ ಬಾರಿ ಅವರಿಗೆ ಹೃದಯಾಘಾತವಾದಾಗ ಡಾ. ದೇವಿ ಅವರನ್ನು ಸಂಪರ್ಕಿಸುವಂತೆ ಅವರ ಸ್ನೇಹಿತರೊಬ್ಬರು ಗಂಗೂಲಿ ಅವರಿಗೆ ಹೇಳಿದ್ದರಂತೆ.