– IPL ನಿಂದ ಅಂತರಾಷ್ಟ್ರೀಯ ಟೂರ್ನಿಗಳಿಗೆ ತೊಂದರೆಯಿಲ್ಲ, ಟಿ20, ಐಪಿಎಲ್, ಏಕದಿನ ಕ್ರಿಕೆಟ್‌ಗೆ ವ್ಯತ್ಯಾಸವಿದೆ
ಚಾಮರಾಜನಗರ: ಬಿಸಿಸಿಐ ಅಧ್ಯಕ್ಷರಾದ ನಂತರ ಇದೇ ಮೊದಲಬಾರಿಗೆ ಚಾಮರಾಜನಗರಕ್ಕೆ (Chamarajanagar) ರೋಜರ್ ಬಿನ್ನಿ (Roger Binny) ಶುಕ್ರವಾರ ಭೇಟಿ ನೀಡಿದ್ದರು.
ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಗರಕ್ಕೆ ಭೇಟಿ ನೀಡಿದ್ದ ಅವರು, ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಓಡಿಸಿ ಖುಷಿಪಟ್ಟರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: ಒಂದೇ ಎಸೆತದಲ್ಲಿ 18 ರನ್ ಕೊಟ್ಟ ರಣಧೀರ – ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಟಿಎನ್‍ಪಿಎಲ್ ಆಟಗಾರ
Advertisement
Advertisement
IPL ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಗೆ ತೊಂದರೆಯಿಲ್ಲ. T20, ಏಕದಿನ, ಟೆಸ್ಟ್ ಹಾಗೂ ಏಕದಿನ ಟೂರ್ನಿಗಳಿಗೆ ವ್ಯತ್ಯಾಸವಿದೆ. ನಾವು ಟೆಸ್ಟ್ ಕ್ರಿಕೆಟ್ ಅನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಟೆಸ್ಟ್ ನಲ್ಲಿ ಕ್ರಿಕೆಟ್ ಭವಿಷ್ಯ ಅಡಗಿದೆ. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೀತಿದೆ. ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್ ಅನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ
Advertisement
Advertisement
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ಪಂದ್ಯದಲ್ಲಿ ಮೊದಲ ದಿನ ಭಾರತ (Team India), ಆಸ್ಟ್ರೇಲಿಯಾ (Australia) ವಿರುದ್ಧ ಸರಿಯಾಗಿ ಆಡಲಿಲ್ಲ. ಟೀಂ ಆಯ್ಕೆಯ ವೇಳೆಯಲ್ಲೂ ಸಣ್ಣ ತಪ್ಪು ಆಗಿದೆ. ಇಲ್ಲದಿದ್ದರೆ ಆ ಪಂದ್ಯ ಗೆಲ್ಲುತ್ತಿದ್ದೆವು. ಪಂದ್ಯ ಗೆಲ್ಲಬೇಕೆಂದರೆ ಇಡೀ ವರ್ಷ ಅಭ್ಯಾಸ ಮಾಡುವ ಅವಶ್ಯಕತೆಯಿಲ್ಲ. ಬದಲಿಗೆ ಟಿ20, ಏಕದಿನ, ಟೆಸ್ಟ್ ಕ್ರಿಕೆಟ್ ಯಾವುದೇ ಆಗಲಿ, ಎಲ್ಲದಕ್ಕೂ ಆಟಗಾರರು ಹೊಂದಾಣಿಕೆ ಆಗಬೇಕು. ಆಗ ಅವರು ಉತ್ತಮ ಆಟಗಾರರಾಗಿರುತ್ತಾರೆ ಎಂದು ತಿಳಿಸಿದರು.