ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯುತ್ತಿದ್ದರು ಕೂಡ ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕರಾಗಿಯೇ ಮುಂದುವರೆಸಿದೆ.
ಬಿಸಿಸಿಐ ಅಧಿಕೃತ ವೆಬ್‍ಸೈಟ್ ನಲ್ಲಿ ಧೋನಿ ಟೀಂ ಇಂಡಿಯಾ ನಾಯಕ ಎಂದೇ ತೋರಿಸುತ್ತಿದ್ದು, ಈ ಮೂಲಕ ಬಿಸಿಸಿಐ ಎಡವಟ್ಟು ಮಾಡಿಕೊಂಡಿದೆ. ಆದರೆ ವಿರಾಟ್ ಕೊಹ್ಲಿ ಮಾಹಿತಿಯಲ್ಲೂ ಟೀಂ ಇಂಡಿಯಾ ನಾಯಕ ಎಂದು ಬರೆಯಲಾಗಿದೆ.
Advertisement
Advertisement
ಇತ್ತೀಚೆಗೆ ಧೋನಿ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ವಿರುದ್ಧ 2ನೇ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಧೋನಿ ಕ್ರಮವಾಗಿ 37 (59 ಎಸೆತ), 42 (66) ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಕಳೆದುಕೊಂಡಿತ್ತು.
Advertisement
ಧೋನಿ ಈಗಾಗಲೇ ಟೆಸ್ಟ್ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಒಟ್ಟು 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ 4,876 ರನ್ ಗಳಿಸಿದ್ದಾರೆ. 2004 ರಲ್ಲಿ ಏಕದಿನ ಮಾದರಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಧೋನಿ ಇದುವರೆಗೂ 321 ಪಂದ್ಯಗಳನ್ನು ಆಡಿದ್ದು, 10,046 ರನ್ ಹಾಗೂ ಟಿ20 ಮಾದರಿಯಲ್ಲಿ 93 ಪಂದ್ಯಗಳಲ್ಲಿ 1,487 ರನ್ ಗಳಿಸಿದ್ದಾರೆ.
Advertisement
ಅಂದಹಾಗೇ ಧೋನಿ 2017 ರಲ್ಲಿ ಟೀಂ ಇಂಡಿಯಾ ನಾಯಕತ್ವ ಪಟ್ಟದಿಂದ ಕೆಳಕ್ಕೆ ಇಳಿದಿದ್ದಾರೆ. 37 ವರ್ಷದ ಧೋನಿ ತಮ್ಮ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಹಲವು ಕಪ್ ಗಳನ್ನು ಗೆಲ್ಲಲು ಕಾರಣರಾಗಿದ್ದು. ಅಲ್ಲದೇ ಎರಡು ವಿಶ್ವಕಪ್ ಗೆದ್ದ ತಂಡದ ನಾಯಕತ್ವ ವಹಿಸಿದ್ದರು. ಅಲ್ಲದೇ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು.