ಲಕ್ನೋ: ಸಿಎಸ್‌ಕೆ (CSK) ವಿರುದ್ಧ ಭರ್ಜರಿ 7 ವಿಕೆಟ್‌ಗಳೊಂದಿಗೆ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್ ಎದುರಾಗಿದೆ. ನಾಯಕ ರಿಷಭ್ ಪಂತ್‌ಗೆ (Rishabh Pant) ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.
ಶುಕ್ರವಾರ (ಮೇ 16) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಾಯಕ ರಿಷಭ್ ಪಂತ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಕೊನೆಯಲ್ಲಿ ಪೂರನ್ 6, 6, 6, 6 – ಲಕ್ನೋಗೆ 7 ವಿಕೆಟ್‌ಗಳ ಭರ್ಜರಿ ಜಯ; CSKಗೆ ಪ್ಲೇ ಆಫ್ ಹಾದಿ ಕಠಿಣ
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ ಕನಿಷ್ಠ ಓವರ್ ರೇಟ್‌ಗೆ ಸಂಬಂಧಿಸಿದ್ದು, ಈ ಸೀಸನ್‌ನಲ್ಲಿ ರಿಷಭ್ ಪಂತ್ ಮೊದಲ ಬಾರಿ ನೀತಿ ಉಲ್ಲಂಘಿಸಿದ್ದಕ್ಕಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಇದಕ್ಕೂ ಮುನ್ನ 2024ರಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿದ್ದಾಗ ತಂಡವು ಮೂರು ಬಾರಿ ನಿಧಾನಗತಿಯ ಓವರ್ ಕಾಯ್ದುಕೊಂಡು ನಿಯಮ ಉಲ್ಲಂಘಿಸಿತ್ತು. ಆ ಸಮಯದಲ್ಲಿ ಬಿಸಿಸಿಐ ಪ್ಲೇಆಫ್ಸ್ ರೇಸ್‌ನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ನ ಲೀಗ್ ಪಂದ್ಯವೊಂದರಿಂದ ರಿಷಭ್ ಪಂತ್ ಅವರನ್ನು ಬ್ಯಾನ್ ಮಾಡಿತ್ತು. ಜೊತೆಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದ ಉಳಿದ ಆಟಗಾರರಿಗೂ ಪಂದ್ಯದ ಶುಲ್ಕದ 50% ಅಥವಾ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಆಗ ರಿಷಬ್ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸಿದ್ದರು.
ಬಿಸಿಸಿಐ ನಿಯಮ ಏನು ಹೇಳುತ್ತೆ?
ಐಪಿಎಲ್ ನಿಯಮಗಳ ಪ್ರಕಾರ, ಒಂದು ಸೀಸನ್‌ನಲ್ಲಿ ತಂಡವೊಂದು ಸತತ ಮೂರು ಬಾರಿ ನಿಧಾನಗತಿಯ ಓವರ್ ಕಾಯ್ದುಕೊಂಡರೆ ನಾಯಕನಿಗೆ ನಿಷೇಧ ಹೇರಲಾಗುತ್ತದೆ. ಮೊದಲ ಬಾರಿ ಉಲ್ಲಂಘಿಸಿದಾಗ 12 ಲಕ್ಷ ರೂ. ದಂಡ, ಎರಡನೇ ಬಾರಿ ಉಲ್ಲಂಘಿಸಿದಾಗ 24 ಲಕ್ಷ ದಂಡ ಹಾಗೂ ಮೂರನೇ ಬಾರಿ ಉಲ್ಲಂಘಿಸಿದಾಗ 30 ಲಕ್ಷ ದಂಡ ಹಾಗೂ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ. ಜೊತೆಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿದ್ದ ಉಳಿದ ಆಟಗಾರರಿಗೂ ಪಂದ್ಯದ ಶುಲ್ಕದ 50% ಅಥವಾ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.ಇದನ್ನೂ ಓದಿ: ಚೆನ್ನೈಗೆ ಇಂದು ಲಕ್ನೋ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ

