ಮುಂಬೈ: 2023ರ ಏಕದಿನ ವಿಶ್ವಕಪ್ (World Cup) ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐಗೆ (BCCI) ದೇಶದಲ್ಲಿ ಜಾರಿಯಲ್ಲಿರುವ ತೆರಿಗೆ (Tax) ಪದ್ಧತಿಯಿಂದಾಗಿ 955 ಕೋಟಿ ರೂ. (116 ಮಿಲಿಯನ್ ಡಾಲರ್) ನಷ್ಟವಾಗುವ ಭೀತಿ ಎದುರಾಗಿದೆ.
ಭಾರತದಲ್ಲಿ 2023ರ ಏಕದಿನ ವಿಶ್ವಕಪ್ ನಡೆಸಲು ಬಿಸಿಸಿಐ ಈಗಾಗಲೇ ಐಸಿಸಿಯಿಂದ ಅನುಮತಿ ಪಡೆದಿದೆ. ಈ ವೇಳೆ ಐಸಿಸಿಯು (ICC) ತೆರಿಗೆ ವಿನಾಯಿತಿ (Tax Exemption) ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಕ್ಕೆ ಬಿಸಿಸಿಐ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಅಂತಾರಾಷ್ಟ್ರೀಯ ಟೂರ್ನಿಗಳ ಆತಿಥ್ಯ ವಹಿಸಿಕೊಳ್ಳುವ ದೇಶದ ಕ್ರಿಕೆಟ್ ಮಂಡಳಿ ಅಲ್ಲಿನ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕು. ಈ ತೆರಿಗೆ ವಿನಾಯಿತಿ ನೇರ ಪ್ರಸಾರದ ಹಕ್ಕು ಸೇರಿದಂತೆ ಟೂರ್ನಿಯ ಆದಾಯಕ್ಕೆ ತೆರಿಗೆ ಹಾಕಬಾರದೆಂಬ ಒಪ್ಪಂದವಿದೆ. ಆದರೆ ಭಾರತದಲ್ಲಿ ಜಾರಿಯಲ್ಲಿರುವ ಜಿಎಸ್‍ಟಿ (GST) ತೆರಿಗೆ ಪ್ರಕಾರ ನೇರ ಪ್ರಸಾರ ಮತ್ತು ಟೂರ್ನಿಯ ಆದಾಯದ ಮೂಲಗಳಿಗೆ ಶೇ.21.84 ರಷ್ಟು ತೆರಿಗೆ ಹಾಕುವ ಹಕ್ಕು ಸರ್ಕಾರಕ್ಕಿದೆ. ಈ ತೆರಿಗೆ ವಿನಾಯಿತಿಯನ್ನು ಐಸಿಸಿ, ಬಿಸಿಸಿಐ ನೋಡಿಕೊಳ್ಳುವಂತೆ ಈ ಹಿಂದೆಯೇ ತಿಳಿಸಿತ್ತು. ಇದನ್ನೂ ಓದಿ: ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್ ಬೀಸಲಿದ್ದಾರೆ ಕಿಚ್ಚ ಸುದೀಪ್
ಐಸಿಸಿಯ ಒಪ್ಪಂದದಂತೆ ಸರ್ಕಾರದೊಂದಿಗೆ ತೆರಿಗೆ ವಿನಾಯಿತಿ ಕುರಿತಾಗಿ ಪತ್ರದ ಮೂಲಕ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ಮನವಿಯನ್ನು ತಿರಸ್ಕರಿಸಿದ್ದು, ತೆರಿಗೆ ಕಟ್ಟುವಂತೆ ಸೂಚಿಸಿದೆ. ಟೂರ್ನಿಯಲ್ಲಿ ಸಂಗ್ರಹವಾಗುವ ಆದಾಯಕ್ಕೆ ಸಮನಾದ ತೆರಿಗೆ ಪಾವತಿಸಬೇಕೆಂದು ಸ್ಪಷ್ಟಪಡಿಸಿದೆ.
ಸರ್ಕಾರದ ಈ ಬಿಗಿನಿಯಮದಿಂದಾಗಿ ಇದೀಗ ಬಿಸಿಸಿಐಗೆ ನಷ್ಟದ ಭೀತಿ ಎದುರಾಗಿದೆ. ಏಕೆಂದರೆ ಸರಿಸುಮಾರು 116 ಮಿಲಿಯನ್ ಡಾಲರ್ ಎಂದರೆ 955 ಕೋಟಿ ತೆರಿಗೆ ಬರುವ ಸಾಧ್ಯತೆ ಇದ್ದು, ಈ ತೆರಿಗೆಯನ್ನು ಐಸಿಸಿ ಕೊಡಲು ಒಪ್ಪಲ್ಲ. ಈಗಾಗಲೇ ಒಪ್ಪಂದದ ಪ್ರಕಾರ ಸರ್ಕಾರ ತೆರಿಗೆ ಕಟ್ಟಲೇಬೇಕೆಂದರೆ ಈ ತೆರಿಗೆಯನ್ನು ಬಿಸಿಸಿಐ ಕಟ್ಟಬೇಕಾಗಿದೆ. ಹಾಗಾದಲ್ಲಿ ಬಿಸಿಸಿಐಗೆ ಟೂರ್ನಿಯಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 2023ರ ಏಕದಿನ AisaCup ಟೂರ್ನಿಗೆ ಪಾಕಿಸ್ತಾನಕ್ಕೆ ಲಗ್ಗೆ ಇಡಲಿದೆ ಭಾರತ
ಈ ಹಿಂದೆ 2016ರ ವಿಶ್ವಕಪ್‍ಗೂ ಮುನ್ನ ಬಿಸಿಸಿಐ ಇದೇ ಸಮಸ್ಯೆಯನ್ನು ಎದುರಿಸಿತ್ತು. ಈ ವೇಳೆ ಕೂಡ ಸರ್ಕಾರ ತೆರಿಗೆ ವಿನಾಯಿತಿಗೆ ಒಪ್ಪಿರಲಿಲ್ಲ. ಹಾಗಾಗಿ ಬಿಸಿಸಿಐ 193 ಕೋಟಿ ರೂ. ತೆರಿಗೆ ಕಟ್ಟಿತ್ತು.