ಮುಂಬೈ: ಟೀಮ್ ಇಂಡಿಯಾದ (Team India) ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಇಶಾನ್ ಕಿಶನ್ (Ishan Kishan) ಸೇರ್ಪಡೆಯಾಗಿದ್ದಾರೆ.
ಮಾನದಂಡ ಏನು?
ಬಿಸಿಸಿಐ ಮಾನದಂಡದ ಅನ್ವಯ ವಾರ್ಷಿಕ ಗುತ್ತಿಗೆ ಪಡೆಯಲು ನಿಶ್ಚಿತ ಅವಧಿಯಲ್ಲಿ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಟಿ20 ಪಂದ್ಯ ಆಡಿರಬೇಕು. ಈ ವಾರ್ಷಿಕ ಆಟಗಾರರ ಒಪ್ಪಂದಗಳು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ ಅನ್ವಯಿಸುತ್ತವೆ. ಇದನ್ನೂ ಓದಿ: PBKS vs RCB – ಕೊಹ್ಲಿ ರನೌಟ್ ಥ್ರೋ, ಸಂಭ್ರಮಾಚರಣೆ ವಿಡಿಯೋ ವೈರಲ್
ಯಾರಿಗೆ ಯಾವ ಗ್ರೇಡ್‌ನಲ್ಲಿ ಸ್ಥಾನ?
ಗ್ರೇಡ್ ಎ+ – ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ – ಎಂಡಿ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಎಂಡಿ ಶಮಿ ಮತ್ತು ರಿಷಭ್ ಪಂತ್.
ಗ್ರೇಡ್ ಬಿ – ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್
ಗ್ರೇಡ್ ಸಿ – ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ರಜತ್ ಪಾಟಿದಾರ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ. ಇದನ್ನೂ ಓದಿ: ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದ 14ರ ವೈಭವ್ – ಒಂದೇ ಪಂದ್ಯದಲ್ಲಿ 2 ದಾಖಲೆ
ಹೊಸ ಸೇರ್ಪಡೆ ಯಾರು? ಯಾಕೆ?
ದೇಶೀಯ ಕ್ರಿಕೆಟ್‌ನಿಂದ ಹೊರಗುಳಿದ ಕಾರಣ ಶ್ರೇಯಸ್ ಅಯ್ಯರ್ ಅವರಿಗೆ ಕಳೆದ ಬಾರಿ ಸ್ಥಾನ ಸಿಕ್ಕಿರಲಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಿಂದ ವಿರಾಮ ಪಡೆದ ನಂತರ ರಣಜಿ ಟ್ರೋಫಿ ಆಡದ ಕಾರಣ ಇಶಾನ್ ಕಿಶನ್ ಅವರನ್ನು ಕೈಬಿಡಲಾಗಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ವರುಣ್ ಚಕ್ರವರ್ತಿಗೆ ಸ್ಥಾನ ಸಿಕ್ಕಿದೆ. ಆರ್ ಅಶ್ವಿನ್ ಅವರು ಎಲ್ಲಾ ಮಾದರಿಯ ಕ್ರಿಕೆಟಿಗೆ ಗುಡ್‌ಬೈ ಹೇಳಿದ ನಂತರ ವರುಣ್ ಚಕ್ರವರ್ತಿಗೆ ತಂಡದಲ್ಲಿ ಸ್ಥಾನ ಸಿಕ್ಕಿತ್ತು.
ಎಷ್ಟು ಹಣ ಸಿಗುತ್ತೆ?
ಗ್ರೇಡ್ ಎ+ – 7 ಕೋಟಿ ರೂ.
ಗ್ರೇಡ್ ಎ – 5 ಕೋಟಿ ರೂ.
ಗ್ರೇಡ್ ಬಿ – 3 ಕೋಟಿ ರೂ.
ಗ್ರೇಡ್ ಸಿ – 1 ಕೋಟಿ ರೂ.