ಮುಂಬೈ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಜಾವೆಲಿನ್ ಒಂದನ್ನು ಇ-ಹರಾಜಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 1.5 ಕೋಟಿ ರೂ. ನೀಡಿ ಖರೀದಿಸಿದೆ.
Advertisement
ಇ-ಹರಾಜು 2021ರಲ್ಲಿ ಆಗಿತ್ತು. ಈ ವೇಳೆ 1.5 ಕೋಟಿ ರೂ. ನೀಡಿ ಖರೀದಿಸಿರುವ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಳಸಿದ್ದ ಜಾವೆಲಿನ್ ಒಂದನ್ನು ನೀರಜ್ ಚೋಪ್ರಾ ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಿದ್ದರು. ಈ ಉಡುಗೊರೆಯನ್ನು ನಮಾಮಿ ಗಂಗಾ ಯೋಜನೆಗೆ ಹಣ ಸಂಗ್ರಹಣೆಗಾಗಿ ಹರಾಜಿಗಿಡಲಾಗಿತ್ತು. ಇ-ಹರಾಜಿನಲ್ಲಿ ಬಿಸಿಸಿಐ ಜಾವೆಲಿನ್‍ನ್ನು ಖರೀದಿಸಿದೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್‌ಗಳ ಮೇಲೆ ರಿಕ್ಷಾ ಹತ್ತಿಸಿದ್ರು
Advertisement
Advertisement
2014ರಲ್ಲಿ ಪ್ರಾರಂಭಗೊಂಡ ನಮಾಮಿ ಗಂಗಾ ಯೋಜನೆಯ ಮೂಲಕ ಗಂಗಾ ನದಿಯ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಹಣ ನಮಾಮಿ ಯೋಜನೆಗೆ ಹರಿದುಬಂದಿದೆ. ಬಿಸಿಸಿಐ ಇ-ಹರಾಜಿನಲ್ಲಿ ಜಾವೆಲಿನ್ ಸಹಿತ ಇತರ ವಸ್ತುಗಳನ್ನು ಖರೀದಿಸಿದೆ. 1,348 ವಿವಿಧ ಕ್ರೀಡಾ ಪರಿಕರಗಳನ್ನು ಹರಾಜಿಗಿಡಲಾಗಿತ್ತು. ಒಟ್ಟು 8,600 ಬಿಡ್ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: 5 ಲಕ್ಷ ರೂ. ಚೆಕ್‌ನೊಂದಿಗೆ ಬಸವಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಸಾಯಿನಾಥ್
Advertisement
ಈ ಹಿಂದೆ ಕೊರೊನಾ ಸಮಯದಲ್ಲಿ ಪಿಎಂ ಕೇರ್ಸ್ ಫಂಡ್‌ಗೆ ಬಿಸಿಸಿಐ 51 ಕೋಟಿ ರೂ. ದೇಣಿಗೆ ನೀಡಿತ್ತು.