ಮುಂಬೈ: ಐಪಿಎಲ್ ನಡುವೆ ಮಹಿಳಾ ಟಿ20 ಚಾಲೆಂಜ್ ಟೂರ್ನಿಗಾಗಿ ಬಿಸಿಸಿಐ ಮೂರು ತಂಡಗಳನ್ನು ಪ್ರಕಟಿಸಿ ಟೀಂ ಇಂಡಿಯಾದ ಆಟಗಾರ್ತಿಯರಾದ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾರನ್ನು ನಾಯಕಿರನ್ನಾಗಿ ಆಯ್ಕೆ ಮಾಡಿದೆ.
Advertisement
ಈ ಬಾರಿ ಟಿ20 ಚಾಲೆಂಜ್‍ಗೆ ಸೂಪರ್ನೋವಾಸ್, ಟ್ರೈಲ್ಬ್ಲೇಜರ್ಸ್ ಮತ್ತು ವೆಲಾಸಿಟಿ ಮೂರು ತಂಡಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಸೂಪರ್ನೋವಾಸ್‍ಗೆ ಹರ್ಮನ್ ಪ್ರೀತ್ ಕೌರ್, ಟ್ರೈಲ್ಬ್ಲೇಜರ್ಸ್‍ಗೆ ಸ್ಮೃತಿ ಮಂದಾನ ಮತ್ತು ವೆಲಾಸಿಟಿ ತಂಡಕ್ಕೆ ದೀಪ್ತಿ ಶರ್ಮಾರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿದೆ. ಮಹಿಳಾ ಟಿ20 ಚಾಲೆಂಜ್ ಮೇ 23 ರಿಂದ 28ರ ವರೆಗೆ ಪುಣೆಯ ಎಮ್‍ಸಿಎ ಮೈದಾನದಲ್ಲಿ ನಡೆಯಲಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ
Advertisement
Advertisement
ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ಒಟ್ಟು 12 ಮಂದಿ ಅಂತಾರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸುತ್ತಿದ್ದಾರೆ. 16 ಸದಸ್ಯರ ಮೂರು ತಂಡಗಳನ್ನು ಅಂತಾರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಮೊದಲ ಪಂದ್ಯ ಸೂಪರ್ನೋವಾಸ್ ಮತ್ತು ಟ್ರೈಲ್ಬ್ಲೇಜರ್ಸ್ ನಡುವೆ ಮೇ 23 ರಂದು ನಡೆಯಲಿದೆ. ಇದನ್ನೂ ಓದಿ: ಉದ್ದನೆ ಕೂದಲಿನ, ತುಟಿಗೆ ಬಣ್ಣ ಹಚ್ಚಿ ದೈತ ದಾಂಡಿಗನಾಗಿ ಗಮನಸೆಳೆದ ಸೈಮಂಡ್ಸ್ ಇನ್ನು ನೆನಪು ಮಾತ್ರ
Advertisement
ಮೇ 24 ರಂದು ಸೂಪರ್ನೋವಾಸ್ ಮತ್ತು ವೆಲಾಸಿಟಿ ನಡುವೆ ನಡೆಯಲಿದ್ದು, 26 ರಂದು ವೆಲಾಸಿಟಿ ತಂಡ ಟ್ರೈಲ್ಬ್ಲೇಜರ್ಸ್ ಎದುರಿಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದೆ.