ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್ ಗರಂ

Public TV
3 Min Read
BC Patil

ಬೆಂಗಳೂರು: ಹಾವೇರಿ (Haveri) ಲೋಕಸಭಾ ಟಿಕೆಟ್ ವಿಚಾರವಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ (B.C.Patil), ಮಾಜಿ ಸಚಿವ ಕೆಎಸ್ ಈಶ್ವರಪ್ಪ (K.S.Eshwarappa) ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

ಈಶ್ವರಪ್ಪ ತಮ್ಮ ಮಗನಿಗೆ ಹಾವೇರಿ ಟಿಕೆಟ್‌ಗಾಗಿ ಓಡಾಟ ನಡೆಸುತ್ತಿದ್ದಾರೆ. ಹಾಗಾಗಿ ನೀವು ಕಾಂಗ್ರೆಸ್ ಕಡೆ ಮುಖ ಮಾಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷ ನನಗೆ ಟಿಕೆಟ್ ಕೊಟ್ಟರೆ ಕಂಟೆಸ್ಟ್ ಮಾಡುತ್ತೇನೆ ಎಂದು ಇಚ್ಛೆ ವ್ಯಕ್ತಪಡಿಸಿದ್ದೇನೆ. ನನಗೆ ಟಿಕೆಟ್ (Ticket) ಕೊಟ್ಟರೆ ನಾನು ನಿಲ್ಲುತ್ತೇನೆ. ಬೇರೆ ಅವರಿಗೆ ಕೊಟ್ಟರೆ ಅವರ ಪರ ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: 5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

ಯಾರು ಯಾರಿಗೋ ಕಂಡ ಕಂಡವರಿಗೆ ಪಕ್ಷ ಟಿಕೆಟ್ ಕೊಡಲ್ಲ. ಭಾರತೀಯ ಜನತಾ ಪಕ್ಷ ಎಲ್ಲರಿಗೂ ಟಿಕೆಟ್ ಕೊಡಲ್ಲ. ನಾವು ಹೇಳಿರೋದು ಹಾವೇರಿ ಮತ್ತು ಗದಗದಲ್ಲಿ ಯಾರಿಗಾದ್ರು ಕೊಟ್ಟರೆ ಓಕೆ. ಅದು ಬಿಟ್ಟು ಹೊರಗಡೆಯಿಂದ ಬಂದವರಿಗೆ ಕೊಡುವ ಪರಿಸ್ಥಿತಿ ಇಲ್ಲ. ಹೊರಗಡೆಯಿಂದ ಬಂದವರಿಗೆ ಟಿಕೆಟ್ ಕೊಟ್ಟರೆ ಕಷ್ಟ. ಕ್ಷೇತ್ರಗಳಿಗೆ ಕೊಡುಗೆ ಇರಬೇಕು. ಕ್ಷೇತ್ರದಲ್ಲಿ ದುಡಿದಿರಬೇಕು. ಅಲ್ಲಿ ಜನಕ್ಕೋಸ್ಕರ ಕೆಲಸ ಮಾಡಬೇಕು. ನಾವು ಪಕ್ಷಕ್ಕೆ ಒತ್ತಾಯ ಮಾಡಿರೋದು ಇಷ್ಟೇ. ಹಾವೇರಿ ಗದಗ ಸ್ಥಳೀಯರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೇವೆ ಎನ್ನುವ ಮೂಲಕ ಈಶ್ವರಪ್ಪಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಇದನ್ನೂ ಓದಿ: ಇಸ್ರೋ ಅಧ್ಯಕ್ಷರಿಗೆ ವಿಕ್ರಂ ಲ್ಯಾಂಡರ್ ಗಿಫ್ಟ್ ನೀಡಿದ ಪುಟ್ಟ ಬಾಲಕ

ನಾನು ಬಿಜೆಪಿ (BJP) ಬಿಟ್ಟು ಹೋಗಲ್ಲ, ಬಿಜೆಪಿಯಲ್ಲೆ ಇರುತ್ತೇನೆ. ಬಿಜೆಪಿ ಬಿಡುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಜೊತೆ ಬಂದಿರುವವರು ಯಾರೂ ಹೋಗಲ್ಲ ಎಂದರು. ಕಳೆದ ಬಾರಿ ಬಿಜೆಪಿಗೆ ಬಂದ ವಲಸಿಗರು ಕೆಲವರು ಕಾಂಗ್ರೆಸ್‌ಗೆ (Congress) ವಾಪಾಸ್ ಆಗುತ್ತಿದ್ದಾರೆ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಮತ್ತೆ ಕಾಂಗ್ರೆಸ್‌ಗೆ ವಾಪಸ್ ಹೋಗಲ್ಲ. ಎಸ್‌ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಹೋಗುತ್ತಾರೆ ಎಂದು ಕೇಳಿಬರುತ್ತಿತ್ತು. ಅವರು ಹೋಗಲ್ಲ. ಅಲ್ಲಿ ಹೋಗಿ ಏನು ಮಾಡಬೇಕು ಹೇಳಿ? ಅದೇ ಲಾಸ್ಟ್ ನಂಬರ್ 137 ಮತ್ತು 138. ಕೊನೇ ಬೆಂಚಲ್ಲಿಯೇ ಅಪಸ್ವರ ಇದೆ, ಅಸಮಾಧಾನ ಇದೆ. ನಾವು ಹೋಗಿ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

ಡಿಕೆ ಶಿವಕುಮಾರ್ (DK Shivakumar) ಜೊತೆ ಬಿಸಿ ಪಾಟೀಲ್ ಫೋಟೋ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಅಂತೆ. ಇದೊಂದು ಆಕಸ್ಮಿಕ ಭೇಟಿ ಅಷ್ಟೇ. ಔಪಚಾರಿಕ ಚರ್ಚೆ, ಬೇರೆ ಯಾವುದೇ ಚರ್ಚೆ ಇಲ್ಲ. ಬರ್ತ್ಡೇ ಪಾರ್ಟಿಗೆ ಹೋಗಿದ್ದೆವು. ಆಗ ಡಿಕೆ ಶಿವಕುಮಾರ್ ಅವರು ಬಂದಿದ್ದರು. ಅವರು ರಾಜ್ಯದ ಉಪಮುಖ್ಯಮಂತ್ರಿ. ಸಹಜವಾಗಿ ಗೌರವ ಕೊಟ್ಟು ಮಾತನಾಡಿಸಬೇಕಾಗುತ್ತದೆ. ಅದೇ ರೀತಿ ಮಾತನಾಡಿಸಿದ್ದೇವೆ ಹೊರತು ಬೇರೆ ಇಲ್ಲ. ಇದು ಆಕಸ್ಮಿಕ ಭೇಟಿ ಅಷ್ಟೇ, ಬೇರೆ ಅರ್ಥ ಬೇಡ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

ಸುದೀಪ್ ಅವರು ಊಟಕ್ಕೆ ಕರೆದಿದ್ದರು. ರಾಜು ಗೌಡರೂ ಬಂದಿದ್ದರು. ಸರ್ಕಾರ ಬಂದಮೇಲೆ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಲಿಲ್ಲ. ಸೌಜನ್ಯಕ್ಕೆ ಮಾತನಾಡಿಸಿದ್ದೇನೆ. ಕಾಮಾಲೆ ಕಣ್ಣಿಗೆ ಜಗತ್ತೆಲ್ಲ ಹಳದಿ ಅಂತೆ. ಸಹಜವಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರೋದು ಆಕಸ್ಮಿಕ. ನಾನು ಬಿಜೆಪಿ ಬಿಟ್ಟು ಹೋಗುತ್ತೇನೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಕಾಂಗ್ರೆಸ್ ನಮ್ಮನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎನ್ನುವುದು ಸುಳ್ಳು. ಡಿಕೆ ಶಿವಕುಮಾರ್ ಅವರು ಬರುತ್ತಾರೆ ಎಂದು ನಾನು ಊಹೆ ಮಾಡಿರಲಿಲ್ಲ ಎಂದರು. ಇದನ್ನೂ ಓದಿ: ಬಹುಪತ್ನಿತ್ವ ನಿಷೇಧ – ಮಸೂದೆ ಮಂಡನೆಗೆ ಮುಂದಾದ ಅಸ್ಸಾಂ ಸರ್ಕಾರ

Web Stories

Share This Article