ಗದಗ: ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆ. ಕಲ್ಪನೆ ಕಲ್ಪನೆಯೇ ಹೊರತು ಸಹಕಾರ ಆಗೋದಕ್ಕೆ ಸಾಧ್ಯವಿಲ್ಲ ಸಚಿವ ಬಿ.ಸಿ ಪಾಟೀಲ್ (BC Patil) ಎಂದರು.
ನಗರದ ಪ್ರವಾಸಿ ಮಂದಿರ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತಕ್ಕೆ (India) ಮುಸ್ಲಿಂ ಪ್ರಧಾನಿ ಆಗ್ಬೇಕು ಎಂಬ ಟ್ವಿಟ್ಟರ್ ಅಭಿಯಾನ, ಕೆಲ ನಾಯಕರ ಹೇಳಿಕೆಗೆ ಕಿಡಿಕಾರಿದರು. ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದು ಹುಚ್ಚು ಕಲ್ಪನೆಯಾಗಿದೆ. ಅಲ್ಲದೇ ಇದು ಭಾರತ ದೇಶವಾಗಿದ್ದು, ಇಲ್ಲಿ ಮುಸ್ಲಿಂ ಪ್ರಧಾನಿ (Prime Minister) ಆಗಲ್ಲ, ಆಗೋದಕ್ಕೆ ಸಾಧ್ಯವೂ ಇಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದರು.
Advertisement
Advertisement
ಸಿದ್ದರಾಮಯ್ಯ (Siddaramaiah) ವಿರುದ್ಧದ ಕಿಕ್ ಬ್ಯಾಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಲೋಕಾಯುಕ್ತ ಮುಚ್ಚಿ ಎಸಿಬಿ ರಚನೆ ಮಾಡಿದ್ದೇ ಅದಕ್ಕೆ ಸಾಕ್ಷಿಯಾಗಿದೆ. ಹಾಗಾದ್ರೆ ಸ್ಟೀಲ್ ಬ್ರಿಜ್ಡ್ ಯಾಕೆ ವಾಪಾಸ್ ಹೋಯ್ತು? ಕಿಕ್ ಬ್ಯಾಕ್ ಆರೋಪ ಬಂದಿದ್ದಕ್ಕೆ ವಾಪಾಸ್ ಹೋಯ್ತುಲ್ಲಾ ಅಂತ ಟಾಂಗ್ ನೀಡಿದರು. ಇದನ್ನೂ ಓದಿ: ನ. 15ರವರೆಗೆ ಲೋಕಲ್, ಸೆಂಟ್ರಲ್ ಟ್ರೈನ್‌ಗಳಲ್ಲಿ ರೈಲ್ ನೀರ್ ಪೂರೈಕೆ ನಿಲ್ಲಿಸಿದ IRTC
Advertisement
Advertisement
ಎಸ್.ಸಿ, ಎಸ್ಟಿ ಕ್ರೆಡಿಟ್ ವಾರ್ ವಿಚಾರಕ್ಕೆ ಮಾತನಾಡಿ, ಎಸ್.ಸಿ, ಎಸ್.ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಸುಮ್ಮನೆ ಆಯೋಗ ರಚನೆ ಮಾಡಿದ್ದೇವೆ ಎಂದರೆ ಹೇಗೆ? ಆಗಲೇ ಜಾರಿ ಮಾಡಬಹುದಿತ್ತಲ್ಲ? ಯಾಕೆ ಮಾಡಿಲ್ಲ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದರು. ಸುಮ್ಮನೆ ಜನರ ಕಣ್ಣು ಒರೆಸುವುದಕ್ಕೆ ಆಯೋಗ ರಚನೆ ಮಾಡ್ಕೊಂಡು ಬಂದರು. ಆದರೆ, ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಯಾರು ಮೀಸಲಾತಿ ಹೆಚ್ಚು ಮಾಡಿದ್ದಾರೆ ಅಂತಾ ಆಯಾ ಜನಾಂಗಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ಮನೆಯನ್ನು ಒಂದಿಂಚು ಜಾಸ್ತಿ ಒಡೆದ್ರೂ ಕಲ್ಲೇಟು- ಅಧಿಕಾರಿಗಳಿಗೆ ಮನೆ ಮಾಲೀಕ ಅವಾಜ್
ಸ್ವಪಕ್ಷದಿಂದ ಕಿರುಕುಳ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಮಾತನಾಡಿದ ಅವರು, ಎಲ್ಲಾ ಸುಳ್ಳು. ಯಾರೂ ಕಿರುಕುಳ ಕೊಡಲ್ಲ, ಜನಾರ್ದನ್ ರೆಡ್ಡಿ ಆರಾಮಾಗಿದ್ದಾರೆ. ಪಕ್ಷದಲ್ಲಿ ಆ ರೀತಿ ನಡೆದಿಲ್ಲ ಎಂದರು. ಈ ವೇಳೆ ಬಿಜೆಪಿ ಮುಖಂಡರಾದ ಎಮ್.ಎಸ್ ಕರಿಗೌಡ್ರ, ರವೀಂದ್ರನಾಥ ದಂಡಿನ, ರಾಜು ಕುರುಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಇದ್ದರು.