ಚಿಕ್ಕೋಡಿ: ರೈತನ ಮನೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ತಾವೇ ಖುದ್ದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು
Advertisement
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ ಶಾ ಎಂಬ ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಉತ್ತರ ಕರ್ನಾಟಕದ ಶೈಲಿಯಲ್ಲಿ ಕುಳಿತು ಮೊಸರು ಕಡಿದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ
Advertisement
Advertisement
ಸಚಿವರ ಬಳಿಕ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ್ ಜೊಲ್ಲೆ ಕೂಡ ಮಜ್ಜಿಗೆ ತಯಾರಿ ಮಾಡಿದ್ದಾರೆ. ಕೊನೆಗೆ ಮಜ್ಜಿಗೆ ಕುಡಿದು ಬಿ.ಸಿ ಪಾಟೀಲ್ ಖುಷಿ ಪಟ್ಟರು. ಬೆಳಿಗ್ಗಿನಿಂದಲೂ ಬಿ.ಸಿ ಪಾಟೀಲ್ ಹಾಗೂ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ರೈತರ ಜಮೀನುಗಳಿಗೆ ತೆರಳಿ ರೈತರು ಅಳವಡಿಸಿಕೊಂಡಿರುವ ವಿಶೇಷ ತಂತ್ರಜ್ಞಾನಗಳನ್ನ ಪರಿಶೀಲಿಸಿ ರೈತರಿಗೆ ಸತ್ಕಾರ ಮಾಡಿದರು. ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಿರಿಯ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement