ಮಡಿಕೇರಿ: ಬಿಜೆಪಿಯವರಿಗೆ (BJP) ಪಾದಯಾತ್ರೆಗಳು ಹೊಸದಲ್ಲ, ನಮ್ಮ ಹಲವು ಯಾತ್ರೆಗಳನ್ನು ಕಾಂಗ್ರೆಸ್ (Congress) ಅವರು ಕಾಪಿ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (BC Nagesh) ಟೀಕಿಸಿದರು.
ಮಡಿಕೇರಿಯಲ್ಲಿ (Madikeri) ಗೋ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತಾನಾಡಿದ ಅವರು, ಕಾಂಗ್ರೆಸ್‍ನವರಿಗೆ ಟೀ ಅಂಗಡಿ ಹೇಗಿರುತ್ತೆ ಎನ್ನುವುದೇ ಗೊತ್ತಿರಲಿಲ್ಲ. ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದು ಗೊತ್ತಿರಲಿಲ್ಲ. ಅವರು ಈಗ ಎಲ್ಲವನ್ನು ನೋಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅವರು ವೋಟಿಗಾಗಿ ಭಾರತ್ ಜೋಡೋ ಯಾತ್ರೆ (Bharat Jodo Yatra) ಆರಂಭಿಸಿದ್ದಾರೆ. ಅಲ್ಲದೇ ಈ ಯಾತ್ರೆಯಲ್ಲಿ ನಿನ್ನೆ ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಅವರಿಗೆ ಮಾಡಿದ ಅಪಮಾನದಿಂದಲೇ ಗೊತ್ತಾಗುತ್ತದೆ. ವಾಲ್ಮೀಕಿ ಫೋಟೊ ಇಟ್ಟು ಕಾಯುತ್ತಿದ್ದರೆ ರಾಹುಲ್ ಗಾಂಧಿ ಅತ್ತ ತಿರುಗಿ ನೋಡಿಲ್ಲ. ಕೊನೆ ಪಕ್ಷ ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ (Siddaramaiah), ಡಿ.ಕೆ. ಶಿವಕುಮಾರ್ (DK Shivakumar), ಪರಮೇಶ್ವರ್ ಅವರು ತಿರುಗಿ ನೋಡಲಿಲ್ಲ ಎಂದು ಕಿಡಿಕಾರಿದರು.
ಇಷ್ಟು ವರ್ಷ ಎಸ್ಸಿ ಎಸ್ಟಿ ಮೀಸಲಾತಿಯನ್ನು ಕಾಂಗ್ರೆಸ್‍ನವರಿಗೆ ಹೆಚ್ಚಿಸಲು ಆಗಿರಲಿಲ್ಲ. ನಮ್ಮ ಸರ್ಕಾರ ಅದನ್ನು ಮಾಡಿದೆ. ಕಾಂಗ್ರೆಸ್ ಅನ್ನು ಮುಸಲ್ಮಾನರು ಬಿಡುವುದಿಲ್ಲ ಎಂದುಕೊಂಡಿದ್ದರು. ಆದರೆ ಮುಸ್ಲಿಮರು ಕಾಂಗ್ರೆಸ್ ಬಿಡಲು ಶುರು ಮಾಡಿರುವುದರಿಂದ ಯಾತ್ರೆಯಲ್ಲಿ ಆರ್‌ಎಸ್‍ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಶುರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪೂರ್ಣ ಬಹಿಷ್ಕಾರಕ್ಕೆ BJP ಎಂಪಿಯಿಂದ ಕರೆ – ಮುಸ್ಲಿಮರ ವಿರುದ್ಧ ಯುದ್ಧ ಸಾರಲಾಗಿದೆ ಎಂದ ಓವೈಸಿ
ಅಲ್ಲದೇ ಯಾತ್ರೆಯಲ್ಲಿ ನನ್ನ ಮಗ ಒಂಟಿ ಆಗುತ್ತಾನೆ ಅಂತ ಸೋನಿಯಾ ಗಾಂಧಿ ಬಂದಿದ್ದಾರೆ. ಮುಂದೆ ಜನರು ಅವರಿಗೆ ಉತ್ತರ ನೀಡಿ ಭಾರತ್ ಜೋಡೋ ಅಲ್ಲ. ಭಾರತ್ ಛೋಡೋ ಎಂದು ಹೇಳುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಸ್ಯಾಂಡಲ್ ವುಡ್ ಬ್ಯಾಡ್ಮಿಂಟನ್ ಲೀಗ್