– ಸಿದ್ದರಾಮಯ್ಯಗೆ ಹಿಜಬ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ
ಮೈಸೂರು: ಸಮಾಜ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ಹಿಜಬ್ ವಿಚಾರದಲ್ಲಿ ಸ್ಪಷ್ಟವಾದ ಆದೇಶ ಜಾರಿ ಮಾಡಿದೆ. ಈ ಬಗ್ಗೆ ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸಮವಸ್ತ್ರ ಕಡ್ಡಾಯ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು. ಪೊಲೀಸ್ ಇಲಾಖೆಯಲ್ಲಿನ ಮುಸ್ಲಿಂರು ಪೊಲೀಸ್ ಕ್ಯಾಪ್ ಹಾಕಲ್ಲ. ಟೋಪಿ ಹಾಕ್ತಿನಿ ಅಂದರೆ ನಡೆಯುತ್ತಾ? ಇದು ಅದೇ ರೀತಿ. ಸರಕಾರದ ಆದೇಶದಂತೆ ಸಮವಸ್ತ್ರ ಧರಿಸಬೇಕು ಎಂದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
ಸಮಾಜ, ಧರ್ಮ ಒಡೆಯುವ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರೊಫೆಸರ್‌ಗಳು. ಅವರಿಂದ ನಮಗೆ ಪಾಠ ಬೇಡ. ರಾಹುಲ್ ಗಾಂಧಿ ಈ ವಿಚಾರದಲ್ಲಿ ಟ್ವೀಟ್ ಮಾಡುವಾಗ ಸಿನಿಮಾ ತಾರೆಯರು ಸಲಹೆ ಪಡೆಯದೆ ಅವರ ತಾಯಿಯ ಸಲಹೆ ಪಡೆದು ಟ್ವೀಟ್ ಮಾಡಲಿ ಎಂದರು. ರಾಹುಲ್ ಗಾಂಧಿಗೆ ತಾಯಿ ಶಾರದೆ, ಏಸು ಒಳ್ಳೆಯ ಬುದ್ಧಿ ಕೊಡಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ
ಸಿದ್ದರಾಮಯ್ಯಗೆ ಈ ವಿಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಶಾದಿ ಭಾಗ್ಯ, ಒಂದೇ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿ ಸಮಾಜ ಒಡೆದದ್ದು ಯಾರು ಎಂಬುದು ಜನರಿಗೆ ಗೊತ್ತಿದೆ. ಶಾಲೆಯಲ್ಲಿ ಶಾರದಾ ಪೂಜೆ, ಗಣಪತಿ ಪೂಜೆ ಇವೆಲ್ಲಾ ಬಿಜೆಪಿ ಸರ್ಕಾರ ಬಂದ ಮೇಲೆ ಬಂದಿಲ್ಲ. ಇದು ಈ ನೆಲದ ಸಂಸ್ಕೃತಿ, ಈ ಬಗ್ಗೆ ಪ್ರಶ್ನೆ ಮಾಡಬೇಡಿ ಎಂದಿದ್ದಾರೆ.