– ಪಾಲಿಕೆ ಅನುಮತಿ ರದ್ದು ಬಳಿಕವೂ ಐಡಿ ಸಮೀಕ್ಷೆ
ಬೆಂಗಳೂರು: ಬಿಬಿಎಂಪಿಯ ವೋಟರ್ ದತ್ತಾಂಶ ಹಗರಣ(Voter Data Scam) ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಿಲುಮೆ(Chilume) ಸಂಸ್ಥೆಯ ಸಿಬ್ಬಂದಿ ಹೊಂಗಸಂದ್ರ ವಾರ್ಡ್‍ನ ಶಾಸಕರ ಕಚೇರಿಯಿಂದ ಕಾರ್ಯನಿರ್ವಹಿಸಿರುವುದು ಬೆಳಕಿಗೆ ಬಂದಿದೆ.
Advertisement
ಚಿಲುಮೆಯ(Chilume) ಅಕ್ರಮಗಳು ಬಯಲಿಗೆ ಬರುವ ಸುಳಿವನ್ನು ಅರಿತಿದ್ದ ಬಿಬಿಎಂಪಿ(BBMP) ತರಾತುರಿಯಲ್ಲಿ ನವೆಂಬರ್ 2ರಂದು ಚಿಲುಮೆಗೆ ನೀಡಿದ್ದ ಸರ್ವೇ ಅನುಮತಿಯನ್ನು ರದ್ದು ಮಾಡಿತ್ತು. ಈ ಬೆನ್ನಲ್ಲೇ ಚಿಲುಮೆಯ ನಾಲ್ಕು ಕಚೇರಿಗಳು ದಿಢೀರ್ ಎಂದು ಬಂದ್ ಆಗಿದ್ದವು. ಇದನ್ನೂ ಓದಿ: ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು
Advertisement
Advertisement
ಈ ಹೊತ್ತಲ್ಲಿ ಚಿಲುಮೆಯ ಸರ್ವೇ ಸಿಬ್ಬಂದಿಗೆ ಆಶ್ರಯ ಸಿಕ್ಕಿದ್ದು ಹೊಂಗಸಂದ್ರ ವಾರ್ಡ್‍ನ(Hongasandra Ward) ಶಾಸಕರ ಕಚೇರಿಯಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿನ ಆ ಪ್ರಭಾವಿ ಶಾಸಕರ ಕಚೇರಿಯಲ್ಲಿ ಕುಳಿತೇ ಚಿಲುಮೆ ಸಂಸ್ಥೆಯ ಸರ್ವೇ ಸಿಬ್ಬಂದಿ ನವೆಂಬರ್ 17ರವರೆಗೂ ಕಾರ್ಯನಿರ್ವಹಿಸಿದ್ದರು ಎನ್ನಲಾಗುತ್ತಿದೆ.
Advertisement
ಈ ಆರೋಪ ನಿಜವೇ ಆದಲ್ಲಿ, ಇಡೀ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ಸಿಗಲಿದೆ. ಬಿಜೆಪಿಯ ಆ ಶಾಸಕ ಮತ್ತು ಬಿಬಿಎಂಪಿ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಈ ಮಧ್ಯೆ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರ ಕ್ಷೇತ್ರಗಳ ಮತದಾರರ ಮಾಹಿತಿಯನ್ನು ಚಿಲುಮೆ ಸಂಸ್ಥೆಯ ರವಿಕುಮಾರ್ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದ್ರೆ ಮದುವೆ ಆಗ್ತೇನೆ ಎಂದ ಕೀಚಕ
ಮತ ಮಾಹಿತಿಗಳವು ಪ್ರಕರಣದಲ್ಲಿ ಬಂಧಿತ ಕಿಂಗ್‍ಪಿನ್ ರವಿಕುಮಾರ್ ವಿಚಾರಣೆ ತೀವ್ರಗೊಂಡಿದೆ. ಚಿಲುಮೆಯ ಕೆಂಪೇಗೌಡ, ಧರ್ಮೇಶ್‍ನನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿವೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಪತ್ರಗಳು ಲಭ್ಯವಾಗಿವೆ.
ಆರ್‌ಓಗಳ ಮೂಲಕವೇ ಮತಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿಲುಮೆ ಮಾಹಿತಿ ಆಧರಿಸಿಯೇ ಆರ್‌ಓಗಳು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಆದರೂ ಈವರೆಗೂ ಕೇವಲ ಮೂವರು ಆರ್‌ಓಗಳನ್ನು ಅಮಾನತು ಮಾಡಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.