ಬೆಂಗಳೂರು: ನಗರದ ಶೇ.70ರಷ್ಟು ಜನರು ಮನೆ ತೆರಿಗೆಯನ್ನೇ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಇದು ಸಿಲಿಕಾನ್ ಸಿಟಿಯಲ್ಲಿ ಮಂದಿ ನಾಚಿಕೆಪಡುವ ವಿಚಾರವಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಬಿಟ್ಟು ಈ ಹಿಂದೆ ತೆರಿಗೆ ಉಳಿಸಿಕೊಂಡವರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಗೆ ಬರೋಬ್ಬರಿ 800 ಕೋಟಿ ರೂ. ತೆರಿಗೆ ಹಣ ಬಾಕಿ ಉಳಿದಿದೆ. ಹೀಗಾಗಿ 72 ಸಾವಿರ ಜನರಿಗೆ ಪಾಲಿಕೆ ನೋಟಿಸ್ ನೀಡಿದೆ.
Advertisement
Advertisement
ಪಾಲಿಕೆ ನಡೆಯುವುದೇ ತೆರಿಗೆ ಹಣದಿಂದ, ವಿಪರ್ಯಾಸವೆಂದರೆ ಜನರು ತೆರಿಗೆ ಹಣವೇ ಕಟ್ಟುತ್ತಿಲ್ಲ. ಅದು ಶೇ.70 ರಷ್ಟು ಜನ ಮಲ್ಟಿಪಲ್ ಪ್ರಾಪರ್ಟಿ ಹೊಂದಿರುವವರೇ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋದು ಗಮನಾರ್ಹವಾಗಿದೆ. ಹೀಗಾಗಿ ತೆರಿಗೆ ಉಳಿಸಿಕೊಂಡ 72 ಸಾವಿರ ಜನಕ್ಕೆ ನೋಟಿಸ್ ನೀಡಲಾಗಿದೆ. ಜೊತೆಗೆ 15 ಸಾವಿರ ಜನಕ್ಕೆ ಜಪ್ತಿ ವಾರೆಂಟ್ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Advertisement
Advertisement
ಇಷ್ಟಲ್ಲದೇ ವಲಯವಾರು 100 ಜನ ತೆರಿಗೆ ವಂಚಿಸಿದವರ ಪಟ್ಟಿಯನ್ನು ಪಾಲಿಕೆ ಸಿದ್ಧಪಡಿಸಿದೆ. ಇದನ್ನು ಸಹ ವೆಬ್‍ಸೈಟ್‍ಗೆ ಹಾಕಿ ತೆರಿಗೆ ವಸೂಲಿ ಮಾಡಲು ನಿಂತಿದೆ. ನೋಟಿಸ್, ಜಪ್ತಿ ವಾರೆಂಟ್ ಹಾಗೂ ತೆರಿಗೆ ವಂಚನೆ ಪಟ್ಟಿಗೆ ಹೆದರಿಯಾದರೂ ತೆರಿಗೆ ಕಟ್ಟುತ್ತಾರ ಎಂದು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv