ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ (BBMP) ಕೈಗೊಂಡಿರುವ ʼಆಪರೇಷನ್ ಬುಲ್ಡೋಜರ್ʼ (Operation Bulldozer) ಕಾರ್ಯಾಚರಣೆಯಲ್ಲಿ ದೊಡ್ಡವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ಎನ್ನುವಂತಾಗಿದೆ. ನಲಪಾಡ್ ಅಕಾಡೆಮಿ (Nalapad Academy) ತೆರವು ಕಾರ್ಯಾಚರಣೆ ವೇಳೆ ದೊಡ್ಡ ಹೈಡ್ರಾಮವೇ ನಡೆದಿತ್ತು. ಈ ವಿಚಾರ ʼಪಬ್ಲಿಕ್ ಟಿವಿʼ ಭಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಾಲೀಕತ್ವದ ನಲಪಾಡ್ ಅಕಾಡೆಮಿಯ ಕಾಂಪೌಂಡ್‌ನ್ನು ಧರೆಗೆ ಉರುಳಿಸಲಾಗಿದೆ. ಈ ವೇಳೆ ಹ್ಯಾರಿಸ್ ಪಿಎ ಸ್ಥಳದಲ್ಲಿ ಒತ್ತುವರಿ ಸ್ಥಗಿತಗೊಳಿಸಲು ಹೈಡ್ರಾಮ ನಡೆಸಿದರು. ನೋಟಿಸ್ ಕೊಟ್ಟಿಲ್ಲ, ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದರು. ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ ಅಧಿಕಾರಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಇದನ್ನೂ ಓದಿ: ನಲಪಾಡ್ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್ ತೆರವಿಗೆ BBMP ಹಿಂದೇಟು!
Advertisement
Advertisement
ಬೆಂಗಳೂರಿನಲ್ಲಿ ಮಳೆ ಅವಾಂತರ, ಒತ್ತುವರಿ ವಿರುದ್ಧ ಮೊನ್ನೆಯಷ್ಟೇ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಇಂದು ತಮ್ಮ ಅಕಾಡೆಮಿ ಮೇಲಿನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ʻರಾಜಕಾಲುವೆ ಒತ್ತುವರಿ ಆಗಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿʼ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
Advertisement
Advertisement
ಪ್ರಭಾವಿಗಳ ಬಿಲ್ಡಿಂಗ್ ತೆರವಿಗೆ ಬಿಬಿಎಂಪಿ ಹಿಂದೇಟು ಹಾಕುತ್ತಿದ್ದು, ಅದಕ್ಕೆ ನಾನಾ ಕಾರಣಗಳನ್ನು ನೀಡುತ್ತಿದೆ. ನಮ್ಮ ಬಳಿ ಜೆಸಿಬಿ, ಬ್ರೇಕರ್ ಕೊರತೆ ಇದೆ ಎಂದು ಕಾರಣಗಳನ್ನು ನೀಡುತ್ತಿದೆ. ಹ್ಯಾರಿಸ್ ಮಾಲೀಕತ್ವದ ನಲಪಾಡ್ ಅಕಾಡೆಮಿಯ ಕೆಲ ಭಾಗಗಳಿಂದ ರಾಜಕಾಲುವೆ ಒತ್ತುವರಿಯಾಗಿತ್ತು. ಇದರ ತೆರವು ಕಾರ್ಯಾಚರಣೆಗೂ ಬೆಳಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕಾರ್ಯಾಚರಣೆ ಮಾತ್ರ ಆರಂಭವಾಗಿರಲಿಲ್ಲ. ಈ ಬಗ್ಗೆ ಕೇಳಿದರೆ, ತೆರವು ಕಾರ್ಯಾಚರಣೆಗೆ ಮೆಟಿರಿಯಲ್ಸ್ ಕೊರತೆ ಇದೆ ಎಂದು ಬಿಬಿಎಂಪಿ ಕಾರಣ ನೀಡುತ್ತಿದೆಯೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 2ನೇ ದಿನ – ಇಂದು ಪ್ರಭಾವಿಗಳ ಕಟ್ಟಡ ಕೆಡವುತ್ತಾ ಪಾಲಿಕೆ?