ಬೆಂಗಳೂರು: ಮಹಾದೇವಪುರದಲ್ಲಿ ಆಪರೇಷನ್ ಬುಲ್ಡೋಜರ್ (Operation Buldozer) ಘರ್ಜಿಸ್ತಿದೆ. ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಗಳನ್ನ ಕಟ್ಟಿಕೊಂಡಿದ್ದು, ಕೋಟಿ ಕುಬೇರ ಮನೆಗಳಿಗೆ ಜೆಸಿಬಿ (JCB) ನುಗ್ಗಿದೆ. ತೆರವು ಕಾರ್ಯಾಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸ್ತಿದ್ದು, ರಾಜಕಾಲುವೆಯ ಮೇಲೆ ಮನೆಯಿಲ್ಲದಿದ್ರೂ ಅವೈಜ್ಞಾನಿಕವಾಗಿ ಒತ್ತುವರಿ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.
ಮಳೆ (Rain) ಯಿಂದಾಗಿ ಪ್ರವಾಹಕ್ಕೆ ಕಾರಣವಾಗಿದ್ದ ಮಹದೇವಪುರ ಕ್ಷೇತ್ರದಲ್ಲಿಗ ಬುಲ್ಡೋಜರ್ ಗಳು ಘರ್ಜಿಸ್ತಿವೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಿದ್ದ ಮನೆಗಳನ್ನ ತೆರವು ಕಾರ್ಯಚರಣೆಯ ಮೂಲಕ, ನೆಲಸಮ ಮಾಡಲಾಗ್ತಿದೆ. ಈ ಕಾರ್ಯಾಚರಣೆಗೆ ಕೆಲ ಮನೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ರಾಜಕಾಲುವೆಗಳ ಮೇಲೆ ಮನೆಗಳು ಇಲ್ಲದಿದ್ರೂ, ಯಾವುದೋ ಒತ್ತಡ, ಪ್ರಭಾವಿಗಳ ಮನೆಗಳನ್ನ ಉಳಿಸಲು ನಮ್ಮ ನಮ್ಮ ಮನೆಗಳನ್ನ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ರು.
ಚಿನ್ನಪ್ಪನಹಳ್ಳಿಯಲ್ಲಿ ಮನೆ ಹೊಂದಿದ್ದ ಮಹಿಳೆಯೊಬ್ಬರು, ತನ್ನ ಮನೆಯ ಗೋಡೆಯನ್ನ ಹೊಡೆದ್ರು ಅಂತ ಕಣ್ಣೀರು ಹಾಕಿದ್ರು. ರಾಜಕಾಲುವೆಯ ಮೇಲೆ ನಮ್ಮ ಮನೆ ನಿರ್ಮಾಣವಾಗಿಲ್ಲ. ಬೇಕಿದ್ರೆ ದಾಖಲೆ ನೋಡಿ ಅಂತ ದಾಖಲೆಗಳನ್ನ ತೋರಿಸಿದ್ರೂ, ಹಿಂದೆ ಮುಂದೆ ನೋಡದೇ ಕೆಲವೇ ಕ್ಷಣಗಳಲ್ಲಿ ಮನೆಯ ಕೌಂಪೌಂಡ್ ಕೆಡವಿದ್ರು. ಮುನ್ನೆನಕೊಳಲುನಲ್ಲಿ 4 ಅಂತಸ್ತಿನ ಬಿಲ್ಡಿಂಗ್ ಅನ್ನು ಮಾರ್ಕಿಂಗ್ ಮಾಡಲಾಗಿದೆ. ಮನೆಯ ಪಿಲ್ಲರ್ ನೆಲಸಮ ಮಾಡುವಷ್ಟು ಜಾಗವನ್ನ ತೆರವಿಗೆ ಸೂಚಿಸಿದ್ದಾರೆ. ಇದರಿಂದ ಮನೆಯ ಮಾಲಕಿ ಕೆಂಡಮಂಡಲರಾದ್ರು. ಸಿಎಂ ಈ ಬಗ್ಗೆ ಗಮನಹರಿಸಬೇಕು ಅಂತ ಕಿಡಿಕಾರಿದ್ರು.
ಕೆ.ಆರ್ ಪುರಂನ ಬಸವನಪುರ ವಾರ್ಡಿನ ಗಾಯತ್ರಿ ಬಡಾವಣೆ, ದೇವಸಂದ್ರ ಸ್ಮಶಾನದಿಂದ ಶೀಗೆಹಳ್ಳಿ ಕೆರೆಗೆ ಸಂಪರ್ಕಿಸುವ ರಾಜಕಾಲುವೆ ತೆರವಿಗೆ ಇಂದು ಅಧಿಕಾರಿಗಳು ಮುಂದಾಗಿದ್ದು, ಇದರಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಜನರಿದ್ದಾರೆ. ಇಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳು ಕೆಲ ಪ್ರಭಾವಿ ವ್ಯಕ್ತಿಗಳ ಸ್ಥಳಗಳನ್ನು ಕಾಪಾಡಲು ನಮ್ಮ ಮನೆಗಳನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದ್ರು. ಇದರ ಪಕ್ಕದಲ್ಲಿರುವ ಅಪಾರ್ಟ್ ಮೆಂಟ್ (Apartment) ಹಾಗೂ ಕಾಲೇಜು ಒತ್ತುವರಿ ಮಾಡಿಕೊಂಡಿರುವ ರಾಜಕಾರಣಿಯ ಬಗ್ಗೆ ಸರ್ವೆ ನಡೆಸಿಲ್ಲ. ನೋಟಿಸ್ ಸಹ ನೀಡದೆ ತೆರವು ಮಾಡಲು ಮುಂದಾಗಿದ್ದಾರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಹಾದೇವಪುರದಲ್ಲಿ ರಾಜಕಾಲುವೆ ಒತ್ತುವರಿ – 8 ಕಡೆ ಜೆಸಿಬಿ ಆಪರೇಷನ್ ಆರಂಭ
ಕೋಟಿ ಕೋಟಿ ಹಣ ಖರ್ಚು ಮಾಡಿ, ಮನೆಗಳನ್ನ ಕಟ್ಟಿಸಿಕೊಳ್ಳಲಾಗಿದೆ. ರಾಜಕಾಲುವೆಯನ್ನು ಬಿಟ್ಟು ಮನೆಯನ್ನು ಕಟ್ಟಿಸಿ ಕೊಂಡಿದ್ದೇವೆ. ಒತ್ತುವರಿ ಮಾಡಿಕೊಂಡ ಪ್ರಭಾವಿಗಳನ್ನು ಬಿಟ್ಟು ನಮ್ಮ ಮನೆಯನ್ನು ಹೊಡೆಯಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ ಎಂದು ಸ್ಥಳೀಯ ವಾಸಿಗಳು ತಮ್ಮ ಅಳಲನ್ನು ತೋಡಿಕೊಳ್ತಿದ್ದಾರೆ. ಅಧಿಕಾರಿಗಳು, ಪ್ರಭಾವಿಗಳ ಒತ್ತಡಗಳಿಗೆ ಮಣಿದು ಬಡವರ ಮೇಲೆ ಈ ರೀತಿ ಕ್ರಮ ತೆಗೆದುಕೊಳ್ಳುತ್ತಿರುವುದು ಇದೇ ಮೊದಲಿನಲ್ಲ. ಸಿಎಂ ಸಾಹೇಬ್ರೇ, ಬಡವರ ಮನೆಗಳನ್ನ ಹೊಡೆದು, ಶ್ರೀಮಂತರ ಮನೆಗಳನ್ನ ಉಳಿಸೋದಾದ್ರೆ ಇದ್ಯಾವ ಸೀಮೆಯ ತೆರವು ಕಾರ್ಯಾಚರಣೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.