-ಸೂಪರ್ ಮಾರ್ಕೆಟ್‍ಗೆ ಬಿಬಿಎಂಪಿ ಗೈಡ್‍ಲೈನ್
ಬೆಂಗಳೂರು: ನಗರದ ಹಲವೆಡೆ ಸೋಂಕು ಹರಡದಿರಲಿ ಎಂದು ಔಷಧಿಗಳ ಸಿಂಪಡನೆ ಆರಂಭವಾಗಿದೆ. ಅದರಲ್ಲೂ ತಗ್ಗು ಪ್ರದೇಶ, ಜನನಿಬಿಡ ಇರುವ ಕಡೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಿ ಸೋಂಕು ನಿಯಂತ್ರಿಸುವ ಕೆಲಸ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸೊಳ್ಳೆ, ನೊಣ ನಿಯಂತ್ರಣಕ್ಕೆ ಹೆಚ್ಚು ಗಮನ ಕೇಂದ್ರಿಕರಿಸಲಾಗಿದೆ. ಮುಖ್ಯವಾಗಿ ಎಲ್ಲ ಮಾರ್ಕೆಟ್, ಬ್ಲಾಕ್ ಸ್ಪಾರ್ಟ್‍ಗಳ ಬಳಿ ಬ್ಲಿಚಿಂಗ್ ಪೌಡರ್ ಬಳಸಲಾಗುತ್ತದೆ. ಇಮಿಗೇಶನ್ ಮಾಡಿದರೆ ಹೆಚ್ಚು ಸಮಯ ಪಡೆಯಲಿದೆ. ಹಾಗಾಗಿ ಮಾಸ್ ಇಮಿಗೇಶನ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಚೈನಾದಂತೆ ಔಷಧಿ ಸಿಂಪಡನೆಗೆ ನಮ್ಮಲ್ಲಿ ಅಗತ್ಯ ಸಲಕರಣೆಗಳ ಕೊರತೆ ಇದೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಕೂಡಲೇ ಕ್ರಮಕೈಗೊಳ್ಳಲಿದೆ ಎಂದರು.
ಇತ್ತ ನಗರದ ಎಸಿ ಸೂಪರ್ ಮಾರುಕಟ್ಟೆಗಳಿಗೆ ಬಿಬಿಎಂಪಿ ಗೈಡ್‍ಲೈನ್‍ಗಳನ್ನು ಸೂಚಿಸಿದೆ. ಈ ಪ್ರಕಾರ ಪಾಲಿಸದಿದ್ದರೆ ಮಾರ್ಕೆಟ್ ಬಂದ್ ಮಾಡಬೇಕಾಗುತ್ತದೆ. ಈ ಭಯ ಸೂಪರ್ ಮಾರ್ಕೆಟ್‍ಗಳಲ್ಲೂ ಕಾಡುತ್ತಿದೆ. ಮಲ್ಲೇಶ್ವರಂ ಬಿಗ್ ಬಜಾರಿನಲ್ಲಿ ಹೊಸ ಕೌಂಟರ್‍ಗಳನ್ನು ತೆರೆಯಲಾಗಿದೆ. ಗ್ರಾಹಕರಿಗೆ ಯಾವುದೇ ಹೊಸ ಆಫರ್ ನೀಡಿಲ್ಲ. ಕಾರಣ ಅದಕ್ಕಾಗಿ ಜನ ಜಾಸ್ತಿ ಸಂಖ್ಯೆಯಲ್ಲಿ ಸೇರಬಾರದೆಂದು ಈ ನಿಯಮ ಹಾಕಲಾಗಿದೆ. ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಸಿಬ್ಬಂದಿಗೆ ಸಮಸ್ಯೆಯಾದರೆ ಕಡ್ಡಾಯ ರಜೆಗೂ ಸೂಪರ್ ಮಾರ್ಕೆಟ್ ಸಜ್ಜಾಗಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್, ಸೂಪರ್ ಮಾರ್ಕೆಟ್, ಪಾರ್ಕ್ ಗಳು ಹೆಚ್ಚಿನ ನಿಗಾ ಇಡಲು ಗೈಡ್‍ಲೈನ್ ಘೋಷಣೆ ಮಾಡಲಾಗಿದೆ. ಜನ ಸಮೂಹ ಅನುಸರಿಬೇಕಾದ ನಿಯಮಗಳ ಹೇಳಲಾಗಿದೆ. ಜನರು ವ್ಯಾಯಾಮ ಮಾಡಲು ಅಡ್ಡಿ ಇಲ್ಲ ಆದರೆ ಪಾರ್ಕ್ ನಲ್ಲಿ ಸೇರುವುದು ಬೇಡ ಎಂದು ಪಾರ್ಕ್ ನಿಯಮಗಳ ಬಗ್ಗೆ ಸಹ ಉಲ್ಲೇಖಿಸಿದರು.