ಬೆಂಗಳೂರು: ನಿಗಧಿಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ರದ್ದಾಗಿದ್ದು, ಚುನಾವಣೆಗಾಗಿ ಮಾಡಿಸಿದ್ದ 3 ಲಕ್ಷ ರೂ. ಊಟ ವೇಸ್ಟ್ ಆಗಿದೆ.
ಬಿಜೆಪಿ ಸದಸ್ಯರು ಚುನಾವಣೆಗೆ ಹಾಜರಾಗಿಲ್ಲ ಅನ್ನೋ ಕಾರಣ ನೀಡಿ ಚುನಾವಣೆ ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಊಟ ಮಾಡೋಕೆ ಯಾರೂ ಇಲ್ಲದೆ ಊಟ ವೇಸ್ಟ್ ಆಗಿದೆ. ವಾಸ್ತವವಾಗಿ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಇನ್ನೂ ಒಮ್ಮತಕ್ಕೆ ಬಂದಿಲ್ಲ ಎನ್ನಲಾಗಿದೆ. ಇದರ ನಡುವೆ ಎಲೆಕ್ಷನ್‍ಗಾಗಿ ಬಿಬಿಎಂಪಿ ಮೂರು ಲಕ್ಷ ರೂ. ವ್ಯರ್ಥ ಮಾಡಿದೆ.
Advertisement
Advertisement
Advertisement
ಚುನಾವಣೆಗಾಗಿ ಬಿಬಿಎಂಪಿ ಪೊಲೀಸ್ ಬಂದೋಬಸ್ತ್ ಸಹ ಪಡೆದಿತ್ತು. ಆದ್ರೆ ಚುನಾವಣೆಗೆ ಪೂರ್ವ ತಯಾರಿ ನಡೆಸದೆ ಸರ್ವಾಜನಿಕರ ಹಣ ಪೋಲು ಮಾಡಿದೆ.
Advertisement
ಚುನಾವಣೆಗಾಗಿ 200 ಜನ ಬಾಣಸಿಗರಿಂದ ಭರ್ಜರಿ ಊಟ ತಯಾರು ಮಾಡಿಸಲಾಗಿತ್ತು. ವಾಂಗಿಬಾತ್, ಅನ್ನ, ಸಾಂಬರ್, ಅಕ್ಕಿರೊಟ್ಟಿ, ಬದನೆ ಕಾಯಿ ಎಣ್ಣೇಗಾಯಿ, ಮೊಸರನ್ನ, ಮೆಣಿಸಿನಕಾಯಿ ಬಜ್ಜಿ, ಹಪ್ಪಳ, ಪಾಯಸ ಹೀಗೆ ತರಾವರಿ ಅಡುಗೆ ಮಾಡಿಸಲಾಗಿತ್ತು.