ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನವು ಆಟದ ಮೈದಾನವಾಗಿದ್ದು, ಬಿಬಿಎಂಪಿ ಆಸ್ತಿ ಆಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಕೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಪ್ರಕಾರ ವರ್ಷದಲ್ಲಿ 2 ಬಾರಿ ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತಿದೆ. ಕೋರ್ಟ್ ನೀಡಿರುವ 2 ಅವಧಿ ಬಿಟ್ಟು ಅವಕಾಶ ಕೇಳಿದ್ದರೆ ಬೇರೆ ಚಟುವಟಿಕೆಗೆ ಅವಕಾಶ ಕೊಡಲಾಗುತ್ತದೆ. ಆದರೆ ಕೋಮು ಸೌಹರ್ದತೆ ಹಾಳಾಗುವ ವಿಚಾರ ಹಾಗೂ ಕಾನೂನು ವಿಚಾರ ತೊಂದರೆ ಆದರೆ ಕೂಡಲೇ ಪೊಲೀಸ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.
ಭಾನುವಾರ ಹಿಂದೂಗಳಿಗೂ ಇತರೆ ಕಾರ್ಯಕ್ರಮಗಳಿಗೆ ಮೈದಾನ ನೀಡಬೇಕು. ಮುಸ್ಲಿಂ ಸಮುದಾಯಕ್ಕೊಂದೇ ಈ ಜಾಗ ಸೀಮಿತವಾಗಿಲ್ಲ ಎಂದು ವಂದೇ ಮಾತರಂ ಸಂಘಟನೆಯ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ್ ಮತ್ತು ಅವರ ತಂಡ, ಈದ್ಗಾ ಮೈದಾನದ ಕಟ್ಟೆಯ ಮೇಲೆ ಕೂತು ಆಗ್ರಹಿಸಿದ್ದರು. ಸ್ಥಳೀಯರು ಕೂಡ ಜಮಾಯಿಸ್ತಿದ್ದಂತೆ ಎಚ್ಚೆತ್ತ ಪೊಲೀಸರು ವಶಕ್ಕೆ ಪಡೆದಿದ್ದರು.
ಕಳೆದ ಮೂರು ದಿನಗಳ ಹಿಂದೆ, ಈ ವಿಚಾರವಾಗಿ ಸನಾತನ ಹಿಂದೂ ಪರಿಷತ್ತು ಕಿಡಿಕಾರಿತ್ತು. ನಮಗೂ ಚಾಮರಾಜಪೇಟೆಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬದ ದಿವಸ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕೊಡಿ ಎಂದು ಸಿಎಂಗೆ ಪತ್ರ ಬರೆದಿತ್ತು. ಇದನ್ನೂ ಓದಿ: ಮಸೀದಿ ಆಯ್ತು ಈಗ ಈದ್ಗಾ ಮೈದಾನ – ಏನಿದು ವಿವಾದ? ಹಿಂದೂಗಳ ವಾದವೇನು? ಬಿಬಿಎಂಪಿ ದಾಖಲೆಯಲ್ಲಿ ಏನಿದೆ?
ಚಾಮರಾಜಪೇಟೆಯ ಮೈದಾನ ಸಾರ್ವಜನಿಕರ ಆಸ್ತಿ. ಆದರೆ ಒಂದೇ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟು, ನಮಗ್ಯಾಕೆ ತಾರತಮ್ಯ ಮಾಡ್ತಾ ಇದ್ದೀರಿ ಅಂತ ಕಿಡಿಕಾರಿದ್ದರು. ಇದರಿಂದ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಲು ಪೊಲೀಸರ ಭದ್ರತೆ ಹೆಚ್ಚಿಸಲಾಗಿತ್ತು. ಇದರ ನಡುವೆಯೂ ಇಂದು ಕನ್ನಡ ಸಂಘಟನೆಯ ಮುಖಂಡರ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ