ಬೆಂಗಳೂರು: ರಾಜಕಾಲುವೆ ಮೇಲೆ ರಾಜರೋಷವಾಗಿ ಅರಮನೆ ಕಟ್ಟಿಕೊಂಡವರಿಗೆ ಬಿಬಿಎಂಪಿ ಪರಿಹಾರ ಕೊಡಬೇಕಂತೆ. ರಾಜಕಾಲುವೆ ಮೇಲೆ ಪುಟ್ಟ ಪುಟ್ಟ ಗುಡಿಸಲು ಕಳೆದುಕೊಂಡವರು ಬೀದಿಪಾಲಾಗಿ ಇನ್ನು ಕಣ್ಣೀರು ಇಡುವಾಗ ಭೂಗಳ್ಳ ಬಿಲ್ಡರ್ ಗಳು ಪರಿಹಾರ ಕೇಳೋದಾ ಅಂತಾ ಎಲ್ಲರಿಗೂ ಅಚ್ಚರಿ ಆಗಬಹುದು.
ಅಷ್ಟಕ್ಕೂ ದೊಡ್ಡ ಭೂಗಳ್ಳರಿಗೆ ಹೊಸ ಅದೃಷ್ಟದ ಬಾಗಿಲು ತೆರೆದಿದ್ದು ಬಿಎಂಟಿಎಫ್. ರಾಜಕಾಲುವೆ ಮೇಲೆ ಲೇಔಟ್ ಕಟ್ಟಲು ಅನುಮತಿ ನೀಡಿದ 20 ಎಂಜಿನಿಯರ್ ಗಳ ಮೇಲೆ ಬಿಬಿಎಂಪಿ ಬಿಎಂಟಿಎಫ್‍ನಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಆದರೆ ಈಗ ಭೂಗಳ್ಳರ ರಕ್ಷೆಗೆ ನಿಂತ ಬಿಎಂಟಿಎಫ್ ಈ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿ ತಿಲಾಂಜಲಿ ನೀಡಿದೆ.
Advertisement
Advertisement
ಇದರಲ್ಲಿ ರಾಜಕಾಲುವೆ ಮೇಲೆ ಲೇಔಟ್ ಕಟ್ಟಲು ಶುಬ್ ಎನ್ ಕ್ಲೇವ್‍ಗೆ ಅನುಮತಿ ಕೊಟ್ಟಿದ್ದ ಎಂಜಿನಿಯರ್ ಗೆ ರಿಲೀಫ್ ಸಿಕ್ಕಿದೆ. ಈಗ ಭೂಗಳ್ಳ ಬಿಲ್ಡರ್ ಗಳ ಅಸಲಿ ಕಾಟ ಶುರುವಾಗಿದ್ದು ಎಂಜಿನಿಯರ್‍ಗೆ ಬಿ ರಿಪೋರ್ಟ್ ಸಿಕ್ಕಿದೆ ಅಂದ್ಮೇಲೆ ಅದ್ಯಾಗೆ ನಮ್ಮ ಲೇಔಟ್‍ನ್ನು ಡೆಮಾಲಿಷ್ ಮಾಡಲಾಗಿದೆ, ಇದಕ್ಕೆ ಪರಿಹಾರ ಕೊಡಬೇಕು, ನಾವು ಮತ್ತೆ ಲೇಔಟ್ ಕಟ್ಟಿಕೊಳ್ಳುತ್ತೇವೆ ಅಂತಾ ಭೂಗಳ್ಳ ಬಿಲ್ಡರ್ ಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
Advertisement
ಇದರಿಂದ ಇಕ್ಕಟ್ಟಿನಲ್ಲಿ ಸಿಕ್ಕಿರುವ ಬಿಬಿಎಂಪಿ, ಬಿಎಂಟಿಎಫ್ ವಿರುದ್ಧವೇ ಕೋರ್ಟ್ ಮೊರೆ ಹೋಗಲು ಸಜ್ಜಾಗಿದೆ. ಇದರ ಜೊತೆಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅನ್ನೋರು ಗೃಹಸಚಿವರಿಗೆ ಬಿಎಂಟಿಎಫ್ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.