ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಬಯಲಾಗಿದೆ.
ಅಸ್ತಿತ್ವದಲ್ಲಿಯೇ ಇಲ್ಲದ ಸಹಕಾರಿ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವರ್ಗವಣೆಯಾಗಿದೆ. ವಿವಿಧ ಯೋಜನೆಗಳ ಫಲಾನುಭವಿಗಳ ಹೆಸರು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಸಣ್ಣ ಉದ್ದಿಮೆದಾರರಿಗೆ ಬಿಬಿಎಂಪಿ ಸ್ವಯಂ ಉದ್ಯೋಗದ ಯೋಜನೆ ದುರ್ಬಳಕೆ ಮಾಡಿ ಹಣ ಲಪಟಾಯಿಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಶಿ ವಾರ್ನಿಂಗ್ ನಾನ್ ಕೇಳ್ತೀನಾ? ನೋಟಿಸ್ ಕೊಡಲಿ ಅಮೇಲೆ ಮಾತಾಡ್ತೀನಿ: ಕೆ.ಎನ್.ರಾಜಣ್ಣ
ಫಲಾನುಭವಿಗಳ ಹೆಸರು, ದಾಖಲೆ ದುರ್ಬಳಕೆ, ಸಹಿ ಸೃಷ್ಟಿ ಮೂಲಕ ಅಕ್ರಮ ನಡೆದಿದೆ. ಈ ಅಕ್ರಮಕ್ಕೆಂದೇ ಸಹಕಾರ ಸಂಘ ಸ್ಥಾಪಿಸಿ, ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿಗೂ ಹಣ ವರ್ಗಾಯಿಸಲಾಗಿದೆ ಎನ್ನಲಾಗಿದೆ.
2019-20, 2020-21 ಸಾಲಿನಲ್ಲಿ ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಕೋಟ್ಯಂತರ ರೂ. ಅಕ್ರಮ ವರ್ಗವಣೆಯಾಗಿದೆ. ಒಟ್ಟಾರೆ ಎಷ್ಟು ಅಕ್ರಮ ಎಂದು ಪತ್ತೆಯಾಗಲು ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಪತ್ರ ಬರೆದಿದೆ. ಲೋಕಾಯುಕ್ತದಲ್ಲಿ ದಾಖಲಾದ ದೂರಿನಿಂದ ಈ ಅಕ್ರಮ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ; ನಕಲಿ ಅಕೌಂಟ್‌ನ ಅಸಲಿ ಮಾಲೀಕರ ಪತ್ತೆ ಮಾಡಿದ ಸಿಐಡಿ
ಬಿಬಿಎAಪಿ ಪಶ್ಚಿಮ ವಲಯದ 9 ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಸರ್ಕಾರಕ್ಕೆ ಪತ್ರ ಬರೆದಿದೆ. 2019-20, 2020-21 ರಲ್ಲಿ ಪಶ್ಚಿಮ ವಲಯದ ಹಣಕಾಸು ವಿಭಾಗದಲ್ಲಿದ್ದ 9 ಅಧಿಕಾರಿಗಳ ವಿರುದ್ಧ ತನಿಖೆಗೆ ಕೋರಲಾಗಿದೆ. ಈ ಕುರಿತಂತೆ ವರದಿ ಸಲ್ಲಿಸಲು ಆಡಳಿತ ವಿಭಾಗದ ಉಪ ಆಯುಕ್ತರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.