ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಫುಟ್ ಪಾತ್ ಅಭಿವೃದ್ಧಿಗಾಗೇ ಕೋಟಿ ಕೋಟಿ ಸುರಿಯಲಾಗುತ್ತದೆ. ಆದರೂ ಹಲವೆಡೆ ಫುಟ್‍ಪಾತ್‍ಗಳು ಕಿತ್ತು ಹೋದ ಸ್ಥಿತಿಯಲ್ಲಿದ್ದು, ಇದಕ್ಕೆ ಪಾಲಿಕೆ ತನ್ನೆಲ್ಲಾ ತಪ್ಪನ್ನು ಇಲಿ, ಹೆಗ್ಗಣಗಳ ಮೇಲೆ ಹಾಕಿದೆ.
ಬೆಂಗಳೂರಲ್ಲಿ ಹಳ್ಳಬಿದ್ದ ರಸ್ತೆಗಳು ಇದ್ದಂತೆಯೇ ಕಿತ್ತೋದ ಫುಟ್‍ಪಾತ್‍ಗಳು ಸಾಕಷ್ಟಿದೆ. ಫುಟ್‍ಪಾತ್ ನಿರ್ಮಾಣಕ್ಕಾಗಿ ಕೋಟಿ ಕೋಟಿ ಹಣವನ್ನು ಬಿಬಿಎಂಪಿ ಖರ್ಚು ಮಾಡುತ್ತದೆ. ಆದರೆ ಈಗ ಫುತ್‍ಪಾತ್‍ಗಳು ಹಾಳಾಗಿರುವುದಕ್ಕೆ ಬಿಬಿಎಂಪಿ ಸಬೂಬೊಂದು ಹುಡುಕಿದ್ದು, ಅದೇ ಇಲಿ, ಹೆಗ್ಗಣ ಕಾಟವಾಗಿದೆ ಎಂದು ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆ ಹಣವನ್ನು ಹೊಳೆಯಂತೆ ಹರಿಸುತ್ತಿದೆ. ಅದರಲ್ಲೂ ರಸ್ತೆಗಾಗಿ ಫುಟ್‍ಪಾತ್‍ಗಾಗಿ ಪದೇ ಪದೇ ಪೋಲು ಮಾಡುತ್ತಲೇ ಇರುತ್ತದೆ. ಸದ್ಯ ಕೋಟಿ ಕೋಟಿ ಸುರಿದ ಕಡೆ ಫುಟ್‍ಫುತ್‍ಗಳನ್ನು ಮಾಡಿದೆ. ಆದರೆ ಅದು ಹಾಳಾಗಿ ಅದರಲ್ಲಿ ಹಳ್ಳ, ಸಂದಿಗಳು ಬೀಳುವುದೇ ಹೆಚ್ಚಾಗಿದೆ. ಇದಕ್ಕೆಲ್ಲಾ ಪಾಲಿಕೆ ಹಲವು ಕಾರಣಗಳನ್ನು ನೀಡಿದೆ.
ಇಲಿ, ಹೆಗ್ಗಣ ಚರಂಡಿಯಲ್ಲಿದ್ದು, ಆಗಾಗ ಹಳ್ಳ, ಹೋಲ್ ಮಾಡುತ್ತಿರುತ್ತದೆ. ಫುಟ್‍ಪಾತ್ ವ್ಯಾಪಾರಿಗಳು ತಮ್ಮ ಶಾಪ್‍ಗಾಗಿ ಹೋಲ್ ಮಾಡುತ್ತಾರೆ. ವಿದ್ಯುತ್ ಕಂಬ ಹಾಕುವಾಗ ಹಲವೆಡೆ ಸಂಧಿಗಳು ಆಗುತ್ತದೆ ಈ ಎಲ್ಲಾ ಕಾರಣದಿಂದಾಗಿ ಫುಟ್‍ಪಾತ್‍ಗಳು ಹಾಳಾಗಿವೆ ಎಂದು ಬಿಬಿಎಂಪಿ ತಿಳಿಸಿದೆ. ಇದನ್ನೂ ಓದಿ: ಕೊಡಗಿನ ರಾಮಕೋಲ್ಲಿಯಲ್ಲಿ ಜಲಸ್ಫೋಟ – ಜನರಲ್ಲಿ ಆತಂಕ
ಪಾಲಿಕೆಯಲ್ಲಿರುವ ಇಲಿ, ಹೆಗ್ಗಣ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಮರೆಮಾಚಲು ಪಾಲಿಕೆ ಈ ರೀತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮಾಯಕ ಇಲಿ, ಹೆಗ್ಗಣ ಮೇಲೆ ತಪ್ಪನ್ನು ಹೊರೆಸಿದೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್