ಬೆಂಗಳೂರು: ಮನೆ ಮನೆಯಿಂದ ಕಸ ಸಂಗ್ರಹಿಸಲು ಶುಲ್ಕ ವಸೂಲಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 46 ಲಕ್ಷ ಮನೆಗಳಿಂದ 2025 ರಿಂದ ಶುಲ್ಕ ವಸೂಲಿ ಆರಂಭಿಸಲು ಚಿಂತನೆ ನಡೆಸಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. 2025 – 06ನೇ ಆರ್ಥಿಕ ವರ್ಷದಿಂದ ಈ ಮಾದರಿಯ ಶುಲ್ಕ ವಸೂಲಾತಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಹೋಗಿದ್ದು, ಸರ್ಕಾರ ಒಪ್ಪಿಗೆ ನೀಡಿಲ್ಲ. ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ಶಾಕ್ – ಕಳೆದೆರಡು ತಿಂಗಳಿಂದ ಸಿಕ್ಕಿಲ್ಲ ಅಕ್ಕಿ ದುಡ್ಡು
46 ಲಕ್ಷ ಮನೆಗಳಿಂದ ಪ್ರತಿ ತಿಂಗಳು 200 ರಿಂದ 400 ರೂಪಾಯಿ ಶುಲ್ಕ ನಿಗದಿ ಮಾಡುವ ಪ್ರಸ್ತಾವನೆ ಇದಾಗಿದೆ. ಆಸ್ತಿ ತೆರಿಗೆ ಜೊತೆಗೆ ಕಸದ ಶುಲ್ಕವನ್ನ ಸಂಗ್ರಹ ಮಾಡೋದರ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ಟೆಂಡರ್ ಕರೆದಿದೆ.
ಮನೆ ಮನೆಯಿಂದ ಕಸ ಸಂಗ್ರಹ, ದ್ವಿತೀಯ ಹಂತದ ವರ್ಗಾವಣೆ ಕೇಂದ್ರಗಳಿಗೆ ಸಾಗಣೆ, ಈ ಕೇಂದ್ರಗಳಿಂದ ಸಂಸ್ಕರಣ ಘಟಕಗಳಿಗೆ ದ್ವಿತೀಯ ಹಂತದ ಸಾಗಣೆ ಒಳಗೊಂಡ ಪ್ಯಾಕೇಜ್ ಇದಾಗಿದೆ. ಪ್ರತಿ ಮನೆಯಿಂದ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವುದರಿಂದ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಇಳಿಮುಖ ಆಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲೂ ಪ್ರಜ್ವಲ್ ರೇವಣ್ಣಗೆ ಸಿಗಲಿಲ್ಲ ಜಾಮೀನು!