ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಿಬಿಎಂಪಿ (BBMP) ವೈಟ್ ಟಾಪಿಂಗ್ ಕಾಮಗಾರಿ ಮಾಡಲು ತಯಾರಿ ನಡೆಸುತ್ತಿದೆ. 15 ಪ್ಯಾಕೇಜ್‌ಗಳಲ್ಲಿ 43 ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲು ಬ್ಲೂಪ್ರಿಂಟ್ ರೆಡಿ ಮಾಡಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಈಗಾಗಲೇ ಎಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದು, ಭೂಮಿ ಪೂಜೆ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ವೈಟ್ ಟಾಪಿಂಗ್ (White Topping) ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಜಲಮಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಂಸ್ಥೆಯ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್ ಲೈನ್‌ಗಳ ಬದಲಾವಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: PublicTV Explainer: ರಾಜ್ಯದಲ್ಲಿ ಆತಂಕ ಮೂಡಿಸಿದ ‘ಡೇಂಜರ್ ಡೆಂಗ್ಯೂ’
ಬೆಂಗಳೂರು ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯ, ರಾಜರಾಜೇಶ್ವರಿ ನಗರ ವಲಯ ಸೇರಿದಂತೆ ಇನ್ನೂ ಕೆಲವು ವಲಯದ 43 ರಸ್ತೆಗಳನ್ನು ಗುರುತು ಮಾಡಿದ್ದು, ವೈಟ್ ಟಾಪಿಂಗ್ ಮಾಡಲು ತಯಾರಿ ನಡೆದಿದೆ. ಈ ವರ್ಷ ಅಥವಾ ಮುಂದಿನ ವರ್ಷದ ಒಳಗೆ ಕಾಮಗಾರಿ ಮುಕ್ತಾಯ ಆಗಲಿದೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ ದುರಂತ; ಹೆಣಗಳ ರಾಶಿ ಕಂಡು ಹೃದಯಾಘಾತದಿಂದ ಪೊಲೀಸ್ ಕಾನ್‌ಸ್ಟೇಬಲ್ ಸಾವು
ವೈಟ್ ಟಾಪಿಂಗ್ ಕಾಮಗಾರಿ ನಡೆಯೋ ರಸ್ತೆಗಳು:
ನಾಗಾವರ ಮೈನ್ ರೋಡ್ ಟು ಶಾಂಪುರ್ ರೋಡ್ ಜಂಕ್ಷನ್
ವೆಸ್ಟಾಫ್ ಕಾರ್ಡ್ ಜಂಕ್ಷನ್ ಟು ವಿಜಯನಗರ ಟಿಟಿಎಂಸಿ
ಮಲ್ಲೇಶ್ವರಂ 18 ಮುಖ್ಯ ರಸ್ತೆ ಟು ಚಿತ್ತಾಪುರ ಮಠ ಸರ್ಕಲ್
ಜಕ್ಕೂರು ರೋಡ್
100 ಫಿಟ್ ರಿಂಗ್ ರೋಡ್ ಜಾಲಹಳ್ಳಿ ಕ್ರಾಸ್ ಟು – ಟಿವಿಎಸ್ ಕ್ರಾಸ್
ಸಿಬಿಐ ರೋಡ್ ಫ್ರಮ್ ಬಳ್ಳಾರಿ ಟು ಆರ್‌ಟಿ ನಗರ ಮೈನ್ ರೋಡ್
ರೇಸ್ ಕೋರ್ಸ್ ರೋಡ್ ಜಂಕ್ಷನ್ ಟು ಮೌರ್ಯ ಸರ್ಕಲ್ ರೋಡ್
ಓಲ್ಡ್ ಪೋಸ್ಟ್ ಆಫೀಸ್ ರೋಡ್ ಟು ಸಿಟಿ ಸಿವಿಲ್ ಕೋರ್ಟ್ ಟು ಮೈಸೂರು ಬ್ಯಾಂಕ್ ಸರ್ಕಲ್
ಮಹಾತ್ಮ ಗಾಂಧಿ ರೋಡ್ ಟು ಮಹಾತ್ಮ ಗಾಂಧಿ ಸರ್ಕಲ್ ಟ್ರಿನಿಟಿ ರೋಡ್
ರೆಸಿಡೆನ್ಸಿ ರೋಡ್ ಟು ರಿಚ್ಮಂಡ್ ಎಂಜಿ ರೋಡ್
ವೈಟ್ ಟಾಪಿಂಗ್ ಮಾಡುತ್ತೇವೆ ಎಂದು ಬಿಬಿಎಂಪಿ ಸಿದ್ಧತೆ ಮಾಡಿಕೊಂಡರೆ ಇನ್ನೊಂದೆಡೆ ಟ್ರಾಫಿಕ್ ಸಮಸ್ಯೆ ಕೂಡ ಆಗಲಿದೆ. ಜೊತೆಗೆ ಕಾಮಗಾರಿ ಆರಂಭ ಮಾಡಿದರೆ ಟ್ರಾಫಿಕ್ ಡೈವರ್ಶನ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತಕ್ಕೆ 116 ಮಂದಿ ಬಲಿ – ಅಂದು ಹೆಡ್ ಕಾನ್‌ಸ್ಟೇಬಲ್ ಈಗ ಸ್ವಯಂಘೋಷಿತ ಗುರು!