ಬೆಂಗಳೂರು: ಮನೆಗಳಲ್ಲಿ ಮತ್ತು ಮಾರಾಟ ಕೇಂದ್ರಗಳಲ್ಲಿ ನಾಯಿ ಸಾಕಾಣಿಕೆ (Dog Breeding) ಮಾಡುವ ಬೆಂಗಳೂರಿನ ಶ್ವಾನಪ್ರಿಯರಿಗೆ BBMP ಹೊಸ ರೂಲ್ಸ್ ಜಾರಿಗೊಳಿಸಲು ಮುಂದಾಗಿದೆ. ಮನೆಯಲ್ಲಿ ಒಂದೇ ಒಂದು ನಾಯಿ ಸಾಕಿದ್ದರೂ ಈ ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ.
ಈ ಹೊಸ ನಿಯಮಗಳನ್ನ ಜಾರಿಗೊಳಿಸುವ ಪ್ರಸ್ತಾವನೆಯನ್ನ ಬಿಬಿಎಂಪಿ ಸರ್ಕಾರದ (Government) ಮುಂದಿಟ್ಟಿದ್ದು, ಯಾವಾಗ ಅನುಷ್ಠಾನಕ್ಕೆ ಬರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
ಹೌದು. ಸಿಲಿಕಾನ್ ಸಿಟಿಯಂತಹ ಮಹಾನಗರದಲ್ಲಿ ITBT ಮಂದಿ ಪ್ರತಿ ಮನೆಯಲ್ಲೂ ನಾಯಿಯನ್ನ ಸಾಕಿರುತ್ತಾರೆ, ಆದ್ರೆ ಅದಕ್ಕೆ ನಿಯಮಗಳೇ ಇರೋದಿಲ್ಲ. ಇದರೊಂದಿಗೆ ನಾಯಿ ಸಾಕಾಣಿಕೆ ಮಾಡಿ ಮಾರಾಟ ಮಾಡುವ ವ್ಯವಹಾರ ಕೂಡ ಜೋರಾಗಿದೆ. ಈ ನಾಯಿ ಸಾಕಾಣಿಕೆಯಲ್ಲಿ ಮತ್ತು ಮಾರಾಟ ಮಾಡುವಲ್ಲಿ ಅವ್ಯವಹಾರ ಆಗಲಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಹೊಸ ರೂಲ್ಸ್ ಜಾರಿಗೆ ತರೋಕೆ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ – ಸೂಕ್ತ ಸಮಯದ ಆಟೋ ಸೇವೆಗೆ ‘ಮೆಟ್ರೋ ಮಿತ್ರ’
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಗಣತಿ ಆಗಿದ್ದು, ನಾಯಿಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ಆದ್ದರಿಂದ ಸಾಕಾಣಿಕೆಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಇದನ್ನೂ ಓದಿ: KRSನಿಂದ 7ನೇ ದಿನವೂ ತಮಿಳುನಾಡಿಗೆ ನೀರು – ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆಗಳು
ಹೊಸ ನಿಯಮಗಳೇನು?
* ನಾಯಿ ಸಾಕಣೆ, ಮಾರಾಟಕ್ಕೆ ಲೈಸೆನ್ಸ್ (ಪರವಾನಗಿ) ಕಡ್ಡಾಯ
* ಮನೆಯಲ್ಲಿ ಮತ್ತು ಮಾರಾಟ ಕೇಂದ್ರದ ಶ್ವಾನಗಳಿಗೆ ರೇಬಿಸ್ ಲಸಿಕೆ ಕಡ್ಡಾಯ
* ಮನೆಗೆ ಒಂದೇ ನಾಯಿ ಸಾಕಬೇಕು
* ನಾಯಿಯನ್ನ ಸಾಕಿ ಬೀದಿಗೆ ಬಿಡುವಂತಿಲ್ಲ
* ಪ್ರತಿ ತಿಂಗಳು ನಾಯಿಗೆ ಸುರಕ್ಷತೆ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು.
Web Stories