ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ಪ್ರಿಯತಮೆಯಿಂದ ಸರ್ಕಾರಿ ಹಣದಲ್ಲಿ ಅಂದ ದರ್ಬಾರ್ ತೋರಿದ ಘಟನೆ ಇಲಿಕಾನ್ ಸಿಟಿಯಲ್ಲಿ ನಡೆದಿದೆ.
ಬಿಬಿಎಂಪಿ ಬ್ಯಾಟರಾಯನಪುರ ಕಚೇರಿ ಎಸ್ ಡಿಎ ಪ್ರಕಾಶ್ ಎಂಬಾತ ತನ್ನ ಪ್ರಿಯತಮೆ ಅಕೌಂಟಿಗೆ ಲಕ್ಷ ಲಕ್ಷ ಹಣ ಟ್ರಾನ್ಸ್‍ಫರ್ ಮಾಡಿರುವುದು ಬಯಲಾಗಿದೆ. ಆಡಿಟ್ ವೇಳೆ ಬಿಬಿಎಂಪಿ ಎಸ್ ಡಿಎ ಪ್ರಕಾಶ್ ಬಂಡವಾಳ ಬಯಲಾಗಿದೆ.
ಬಿಬಿಎಂಪಿಯು 2021 -22 ರ ಅವಧಿಯ ಆಡಿಟ್ ನಡೆಸುತ್ತಿತ್ತು. ಈ ವೇಳೆ ಬ್ಯಾಟರಾಯನಪುರ ಕಚೇರಿಯ ಆಡಿಟ್ ಪುಸ್ತಕ ಒದಗಿಸಲು ಇಇ ರಾಜೇಂದ್ರ ನಾಯಕ್ ಅವರು ಪ್ರಕಾಶ್ ಗೆ ಸೂಚಿಸಿದರು. ದರೆ ಪ್ರಕಾಶ್, ಆಡಿಟ್ ಪುಸ್ತಕ ಒದಗಿಸದೆ ರಜೆ ಮೇಲೆ ತೆರಳಿದ್ದ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಖುದ್ದು ತಾವೇ ಪರಿಶೀಲನೆ ನಡೆಸಿದರು. ಕೆನರಾ ಬ್ಯಾಂಕ್ ಅಕೌಂಟ್ ಪರಿಶೀಲನೆ ವೇಳೆ ಹಣ ದುರುಪಯೋಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: 8 ತಿಂಗಳ ಗರ್ಭಿಣಿಯನ್ನು ಒದ್ದ ಟಿಎಂಸಿ ಶಾಸಕನ ಬೆಂಬಲಿಗರು
ಸುಮಾರು 14.70 ಲಕ್ಷ ಹಣ ಪ್ರಕಾಶ್ ಹಾಗೂ ಪ್ರೇಯಸಿ ಕಾಂಚನಾ ಅಕೌಂಟ್‍ಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಇಇ ರಾಜೇಂದ್ರ ನಾಯಕ್ ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ಎಸ್ ಡಿಎ ಪ್ರಕಾಶ್ ಮತ್ತು ಆತನ ಪ್ರೇಯಸಿ ಕಾಂಚನಾ ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಕಾಂಚನಾ ಚಿನ್ನ ಖರೀದಿ ಹಾಗೂ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.