ಬೆಂಗಳೂರು: ಮೆಟ್ರೋ ದರ, ಹಾಲಿನ ದರ, ವಿದ್ಯುತ್ ದರದ ಬಳಿಕ ಈಗ ಬೆಂಗಳೂರಿಗರಿಗೆ (Bengaluru) ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ (ಏ.1) ಕಸದ (Garbage) ಮೇಲೆ ಸೆಸ್ (Cess) ಜಾರಿ ಆಗಲಿದೆ.
ಮನೆ ಮನೆ ಕಸ ಸಂಗ್ರಹಿಸಲು ಇನ್ನೂ ಮುಂದೆ ತೆರಿಗೆ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ಸೆಸ್ ವಿಧಿಸಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಎಂದು ವಸೂಲಿ ಮಾಡಲು ಬಿಬಿಎಂಪಿ (BBMP) ಮುಂದಾಗಿದೆ. ಅಂಗಡಿ, ಹೋಟೆಲ್‍ಗಳಿಗೆ ಒಂದು ತೆರಿಗೆ, ರೆಸಿಡೆನ್ಷಿಯಲ್ ಕಟ್ಟಡಗಳಿಗೆ ಮತ್ತೊಂಡು ರೀತಿ ಕಸದ ಸೆಸ್ ವಿಧಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ
ಹೋಟೆಲ್‍ಗಳಿಗೆ ಮೊದಲು ಒಂದು ಕೆಜಿ ಕಸಕ್ಕೆ 5 ರೂ. ನಿಗದಿ ಮಾಡಲಾಗಿತ್ತು. ಈಗ 12 ರೂ.ಗೆ ಏರಿಸಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಕಸಕ್ಕೆ ಸೆಸ್ ಹಾಕಲಿದ್ದಾರೆ. ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ಬಿಬಿಎಂಪಿ ವಸೂಲಿ ಮಾಡಲಿದೆ.
ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?
600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ.
600 ಚದರ ದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ.
1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ.
2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ.
3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ.
4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ.
ಇದರಿಂದ ಘನತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ವಾರ್ಷಿಕ 600 ಕೋಟಿ ರೂ. ಅದಾಯ ನಿರೀಕ್ಷೆ ಮಾಡಲಾಗಿದೆ. ಇದನ್ನೂ ಓದಿ: ಸೈಲೆಂಟ್ ಆಗಿದ್ದ ಶಾಸಕ ಯತ್ನಾಳ್ ಫುಲ್ ವೈಲೆಂಟ್ – ವಿಜಯದಶಮಿಗೆ ಹೊಸ ಪಕ್ಷ..?