ಬೆಂಗಳೂರು: ನಗರದಲ್ಲಿ ಆಚರಿಸುವ ಗಣೇಶೋತ್ಸವಗಳಿಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ 15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ ಎಂಬ ಷರತ್ತನ್ನು ವಿಧಿಸಿದೆ.
Advertisement
15 ದಿನಕ್ಕಿಂತ ಹೆಚ್ಚು ದಿನ ಗಣೇಶ ಕೂರಿಸುವಂತಿಲ್ಲ. ಆಗಸ್ಟ್ 31 ರಿಂದ ಸೆಪ್ಟೆಂಬರ್ 15 ರವರೆಗೆ ಮಾತ್ರ ಗಣೇಶ ಇಡಲು ಅನುಮತಿಯನ್ನು ಬಿಬಿಎಂಪಿ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೋರಿಗೆ, ಅನುಮತಿಗಾಗಿ ಅಲೆಯುವ ವ್ಯವಸ್ಥೆ ತಪ್ಪಿಸಿದೆ. ಬೆಸ್ಕಾಂ, ಪೊಲೀಸ್, ಬಿಬಿಎಂಪಿ ಅಂತಾ ಪ್ರತ್ಯೇಕವಾಗಿ ಓಡಾಡೋದನ್ನು ತಪ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡಿದೆ. ಆದರೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಇನ್ನೂ ಅನುಮತಿ ನೀಡಿಲ್ಲ. ಆದರೇನಂತೆ, ಅನುಮತಿ ಸಿಕ್ಕೇ ಸಿಗುವ ವಿಶ್ವಾಸದಲ್ಲಿರುವ ಹಿಂದೂ ಸಂಘಟನೆಗಳು, ಈದ್ಗಾ ಮೈದಾನದಲ್ಲಿ 11 ದಿನ ಗಣೇಶೋತ್ಸವ ಆಚರಿಸ್ತೀವಿ ಎಂದು ಬ್ಯಾನರ್ ಕೂಡ ರೆಡಿ ಮಾಡಿಸಿವೆ. ಇದನ್ನೂ ಓದಿ: ಇಂದು 1,713 ಕೇಸ್ – ಈವರೆಗೆ ರಾಜ್ಯದಲ್ಲಿ ಒಟ್ಟು 40,40,111 ಪ್ರಕರಣ
Advertisement
Advertisement
ಈದ್ಗಾ ಮೈದಾನದಲ್ಲಿ ಗಣಪನ ಕೂರಿಸುವ ವಿಚಾರದಲ್ಲಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿಯ ಮಧ್ಯೆ ಸಮರ ಶುರುವಾಗಿದೆ. ಪಾದರಾಯನಪುರದಿಂದ ಟೌನ್‍ಹಾಲ್ ಮಾರ್ಗವಾಗಿ ಮೆರವಣಿಗೆ ನಡೆಸಲು ಗಣೇಶೋತ್ಸವ ಸಮಿತಿ ಪ್ಲಾನ್ ಮಾಡಿವೆ. ಇಂದು ಸ್ಥಳ ಪರಿಶೀಲನೆ ಕೂಡ ಮಾಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಾವರ್ಕರ್ ಪಾರ್ಕ್ ನಿರ್ಮಾಣ – ಸ್ವಾತಂತ್ರ್ಯ ಸೇನಾನಿ ಎಂದು ಒಪ್ಪಿದ್ದ ಕಾಂಗ್ರೆಸ್ಸಿಗರು
Advertisement
Live Tv
[brid partner=56869869 player=32851 video=960834 autoplay=true]