Bengaluru RuralDistrictsKarnatakaLatestMain Post

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಜೀವ ಬಲಿ

ಬೆಂಗಳೂರು: ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ, ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಮೂಗೇನಹಳ್ಳಿ ಗೇಟ್ ಬಳಿ ಭಾನುವಾರ ಸಂಭವಿಸಿದೆ.

ಮೃತ ಯುವಕನನ್ನು ಮಾವಿನಕುಂಟೆ ಗ್ರಾಮದ ರಾಜು (28) ಎಂದು ಗುರುತಿಸಲಾಗಿದೆ. ಮೂಗೇನಹಳ್ಳಿ ಗೇಟ್ ಸಮೀಪದ ತಿರುವಿನಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿ ವೇಗವಾಗಿ ಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಇದನ್ನೂ ಓದಿ: ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

ಘಟನೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದ ಕಸದ ಲಾರಿ ಸಹ ಮುಗುಚಿ ಬಿದ್ದಿದ್ದು, ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನಾಥ ಸೇವಾಶ್ರಮದ ಅಧ್ಯಕ್ಷ ಸ್ಥಾನದಿಂದ ಮುರುಘಾ ಶ್ರೀ ವಜಾ

Live Tv

Leave a Reply

Your email address will not be published.

Back to top button