ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು ಮೂರ್ಛೆರೋಗದ ಕಥೆ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೆಂಡತಿ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಆರೋಪಿಗಳಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮಂಡ್ಯಕ್ಕೆ ಮಹೇಶ್ ಶವವನ್ನು ತೆಗೆದುಕೊಂಡು ಹೋಗಿ ಮೂರ್ಛೆರೋಗ ಬಂದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶಿಲ್ಪಾ ಕಥೆ ಕಟ್ಟಿದ್ದಳು. ಈ ಬಗ್ಗೆ ಅನುಮಾನಗೊಂಡು ಪೋಷಕರು ಮಹೇಶ್ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಗಾಯಗಳು ಗುರುತು ಪತ್ತೆಯಾಗಿದೆ. ಈ ಕುರಿತಂತೆ ಕೂಡಲೇ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಅನ್ಯಧರ್ಮದ ಹುಡುಗಿಯೊಂದಿಗೆ ಪ್ರೇಮ – ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
Advertisement
Advertisement
ನಂತರ ಮಂಡ್ಯ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹೇಶ್ ಕೊಲೆಯಾಗಿರುವುದು ದೃಢಪಟ್ಟಿದೆ. ನಂತರ ಈ ಸಂಬಂಧ ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣಗುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?
Advertisement
ಬೆಂಗಳೂರಿನ ಶಿಲ್ಪಾಳನ್ನು ಮಹೇಶ್ ಅವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ದಂಪತಿ ವಾಸವಾಗಿದ್ದರು.