ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿಯ ಕ್ವಾಲಿಟಿ ಕಂಟ್ರೋಲ್ ಕಚೇರಿ (BBMP) ಕಟ್ಟಡದಲ್ಲಿ ಅಗ್ನಿ ಅವಘಡಕ್ಕೆ ಕಾರಣ ಕರ್ತರು ಎನ್ನಲಾದ ಕ್ವಾಲಿಟಿ ಕಂಟ್ರೋಲರ್ ಸುರೇಶ್ ಬ್ಯಾಗ್ ರೌಂಡ್ ಬಹಳ ರೋಚಕವಾಗಿದೆ.
ಸಾಮಾನ್ಯವಾಗಿ ಬಿಇ ಮಾಡಿರುವ ವ್ಯಕ್ತಿಗಳನ್ನ ಎಂಜಿನಿಯರ್ ಕೆಲಸ ಮಾಡೊದಕ್ಕೆ ಸರ್ಕಾರಗಳು ನೇಮಿಸಿಕೊಳ್ಳೋದು ವಾಡಿಕೆ. ಆದರೆ ಪಾಲಿಕೆಯಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ ಕೇವಲ 9 ನೇ ತರಗತಿ ಓದಿರುವ ವ್ಯಕ್ತಿಯನ್ನ ಪಾಲಿಕೆಯಲ್ಲಿ ಕ್ವಾಲಿಟಿ ಕಂಟ್ರೋಲ್ ಕೆಲಸ ಮಾಡಲು ನೇಮಿಸಿಕೊಂಡಿರೋದು ನೋಡಿದರೆ ಪಾಲಿಕೆಯ ಕ್ವಾಲಿಟಿ ಎಷ್ಟರ ಮಟ್ಟಿಗೆ ಇದೆ ಅನ್ನೋದು ಮನಗಾಣ ಬೇಕಾಗುತ್ತೆ.
ಪೊಲೀಸರ ತನಿಖೆಯ ವೇಳೆ ಕ್ವಾಲಿಟಿ ಕಂಟ್ರೋಲ್ ಮಾಡುತ್ತಿದ್ದ ಸುರೇಶ್, ಎಇಇ ಆನಂದ್ ಸೇರಿ ಮೂವರನ್ನ ಹಲಸೂರು ಗೇಟ್ ಪೊಲೀಸರು ಕಳೆದ 24 ಗಂಟೆಯಿಂದ ತೀವ್ರ ವಿಚಾರಣೆ ಮಾಡಿದಾಗ ಅಗ್ನಿ ಅವಘಡವಾದಗ ಕ್ವಾಲಿಟಿ ಕಂಟ್ರೋಲ್ ಹ್ಯಾಂಡಲ್ ಮಾಡುತ್ತಿದ್ದ ಸುರೇಶ್ ಇತಿಹಾಸ ಬೆಳಕಿಗೆ ಬಂದಿದೆ. ಆತ ಕೆಲಸ ಮಾಡಿದ್ದಕ್ಕೂ ಅವನ ಓದಿಗೂ ವ್ಯತ್ಯಾಸ ಇಲ್ಲ ಅನ್ನೋದು ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಸ್ ಹತ್ತಿಲ್ಲ, ರೈಲು ಏರಿಲ್ಲ – ಲಿಫ್ಟ್ ಕೇಳಿಯೇ 20 ಸಾವಿರ ಕಿ.ಮೀ ಪ್ರಯಾಣಿಸಿದ ವಿದೇಶಿ ಪ್ರಜೆ
ಕಳೆದ 24 ಗಂಟೆಯಿಂದ ಪ್ರಕರಣದ ಎ1 ಆರೋಪಿ ಎಇಇ ಆನಂದ್ , ಎ2 ಆರೋಪಿ ಸ್ವಾಮಿ, ಎ3 ಆರೋಪಿ ಸುರೇಶ್ ನನ್ನ ತೀವ್ರ ವಿಚಾರಣೆ ಮಾಡಿ ಮತ್ತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಕಳಿಸಿಕೊಡಲಾಗಿದೆ. ಹೆಚ್ಚಿನ ತನಿಖೆಗೆ ಅವಶ್ಯಕತೆ ಇರುವ ಹಿನ್ನೆಲೆ ನೋಟಿಸ್ ಕೊಟ್ಟು ಕಳಿಸಿಕೊಡಲಾಗಿದೆ.
Web Stories