ನವದೆಹಲಿ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
Advertisement
ಇಂದು ವಕೀಲರ ಅಲಭ್ಯತೆ ಹಿನ್ನೆಲೆ ಆರಂಭದಲ್ಲಿ ವಿಚಾರಣೆ ತಾತ್ಕಲಿಕವಾಗಿ ಮುಂದೂಡಲಾಗಿತ್ತು. ಬಳಿಕ ಸಮಯದ ಕೊರತೆ ಹಿನ್ನೆಲೆ ಮಂಗಳವಾರ ವಿಸ್ತೃತ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಹಿಂದಿನ ವಿಚಾರಣೆ ವೇಳೆ ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಎಂಟು ವಾರಗಳ ಗಡುವು ನೀಡಿತ್ತು. ಆದರೆ ಈ ಅವಧಿ ಮುಗಿದರೂ ಇನ್ನು ಚುನಾವಣೆ ಘೋಷಣೆಯಾಗದ ಹಿನ್ನೆಲೆ ಮತ್ತೊಮ್ಮೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಹೈಕಮಾಂಡ್‍ಗೆ ಸೆಡ್ಡು ಹೊಡೆದ ಬಿಎಸ್‍ವೈ – ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಹಿಂದಿದೆ ಹಲವು ಲೆಕ್ಕಾಚಾರ
Advertisement
Advertisement
ವಾರ್ಡ್‍ಗಳ ಪುನರ್ ವಿಂಗಡನೆ ಮಾಡಿರುವ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆ ಇಂದಿನ ವಿಚಾರಣೆ ವೇಳೆ ಮತ್ತಷ್ಟು ಕಾಲಾವಕಾಶ ಕೇಳಲು ರಾಜ್ಯ ಸರ್ಕಾರದ ಪರ ವಕೀಲರು ನಿರ್ಧರಿಸಿದ್ದರು. ಇದನ್ನೂ ಓದಿ: ಬಿಎಸ್‌ವೈಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್
Advertisement
ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಚುನಾವಣೆ ಮುಂದೂಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾದಿಸಲು ಅರ್ಜಿದಾರರಾದ ಎಂ. ಶಿವರಾಜು ಮತ್ತು ವಾಜಿದ್ ಪರ ವಕೀಲರು ಸಿದ್ಧರಾಗಿದ್ದರು. ವಿಚಾರಣೆ ಮುಂದೂಡಿಕೆಯಾಗಿರುವ ಹಿನ್ನೆಲೆ ಮಂಗಳವಾರ ಬಿಬಿಎಂಪಿ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ.