ಬೆಂಗಳೂರು: ಬಿಬಿಎಂಪಿಯು (BBMP) ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್ ನೀಡಿವೆ. ಪಾಲಿಕೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆಯಡಿ ಉಚಿತ ಆರೋಗ್ಯ ವಿಮೆ (Ayushman Bharat) ಮಾಡಿಸಲು ನಿರ್ಧರಿಸಿದೆ.
ಇಂದು (ಗುರುವಾರ) ಮಂಡಿಸಿದ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಈ ಘೋಷಣೆ ಮಾಡಲಾಯಿತು. ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪಾಲಿಕೆಯ ಶಾಲಾ/ಕಾಲೇಜುಗಳ ಮತ್ತು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗಾಗಿ ವೈದ್ಯಕೀಯ ತಪಾಸಣೆ, ಔಷಧಿಗಳ ವಿತರಣೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದೆ. ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್ ಪಾರ್ಕಿಂಗ್!
Advertisement
Advertisement
ಬ್ರ್ಯಾಂಡ್ ಬೆಂಗಳೂರು- ಶಿಕ್ಷಣ ಬೆಂಗಳೂರು ಅಡಿ ಸಿಕ್ಕಿದ್ದೇನು?
– ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್, ಸೈನ್ಸ್ ಲ್ಯಾಬ್, ಇ-ಗ್ರಂಥಾಲಯ ಸ್ಥಾಪನೆಗೆ 10 ಕೋಟಿ ರೂ.
– ಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ 19 ಶಾಲಾ ಕಟ್ಟಡ ಪೂರ್ಣ ತೆರವು ಮತ್ತು ಪುನರ್ ನಿರ್ಮಾಣ
– 67 ಶಾಲಾ/ಕಾಲೇಜುಗಳ ಕಟ್ಟಡ ದುರಸ್ತಿ ಕಾರ್ಯ
– ಶೌಚಾಲಯ ನಿರ್ವಹಣೆ, ಕುಡಿಯುವ ನೀರಿನ ಘಟಕ
– ಈ ಎಲ್ಲ ಕಾಮಗಾರಿಗಳಿಗೆ ಒಟ್ಟು 35 ಕೋಟಿ ರೂ. ಅನುದಾನ
Advertisement
Advertisement
ʼಶಾಲೆ ತೋಟʼ ಕಾರ್ಯಕ್ರಮ
ಪಾಲಿಕೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳಿಗೆ ಕೃಷಿ ಮತ್ತು ತೋಟಗಾರಿಕೆಯ ಪರಿಕಲ್ಪನೆ ಹಾಗೂ ಪರಿಸರದ ಕಾಳಜಿ ಮೂಡಿಸಲು ಶಾಲೆ ತೋಟ ವಿಶಿಷ್ಟ ಕಾರ್ಯಕ್ರಮ. ಈ ಯೋಜನೆಯಡಿ ಶಾಲೆಯ ಆವರಣದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕೃಷಿ ಬೆಳೆಗಳು, ತರಕಾರಿ ಮತ್ತು ಹೂ ಬೆಳೆಯಲು ಒಟ್ಟು 5 ಕೋಟಿ ರೂ. ಅನುದಾನ ನೀಡಲಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್ ನಿರ್ಮಾಣ