ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್‌ ಕ್ಯಾಚ್ ಕಂಡು ದಂಗಾದ ಫೀಲ್ಡರ್

Public TV
1 Min Read
MAXWELL 1

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಬಿಗ್‍ಬಾಶ್ ಟಿ20 ಲೀಗ್‌ ನಡೆಯುತ್ತಿದ್ದು, ಡಗೌಟ್‍ನಲ್ಲಿ ಕುಳಿತಿದ್ದ ಮೆಲ್ಬರ್ನ್ ಸ್ಟಾರ್ಸ್ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ ಹಿಡಿದ ಸಿಂಪಲ್ ಕ್ಯಾಚ್ ಕಂಡು ಎದುರಾಳಿ ತಂಡದ ಫೀಲ್ಡರ್ ದಂಗಾಗಿದ್ದಾರೆ.

MAXWELL 1 1

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ಪಂದ್ಯ ನಡೆಯುತ್ತಿತ್ತು. ಮೆಲ್ಬರ್ನ್ ಸ್ಟಾರ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಸ್ಟೋಯಿನಿಸ್ ಬಿಗ್ ಸಿಕ್ಸರ್ ಒಂದನ್ನು ಸಿಡಿಸಿದರು. ಈ ವೇಳೆ ಇದನ್ನು ಹಾರಿ ಹಿಡಿಯಲು ಬ್ರಿಸ್ಬೇನ್ ಹೀಟ್ ತಂಡದ ಫೀಲ್ಡರ್ ಪ್ರಯತ್ನ ಪಟ್ಟರು. ಆದರೆ ಕ್ಷಣ ಮಾತ್ರದಲ್ಲಿ ಡಗೌಟ್‍ನಲ್ಲಿ ಕುಳಿತಿದ್ದ ಮ್ಯಾಕ್ಸ್‌ವೆಲ್‌ ಆ ಚೆಂಡನ್ನು ಒಂದೇ ಕೈಯಲ್ಲಿ ಸಿಂಪಲ್ ಆಗಿ ಕ್ಯಾಚ್ ಹಿಡಿದು ಫೀಲ್ಡರ್‌ಗೆ ನೀಡಿದರು. ಇದನ್ನೂ ಓದಿ: ಆರ್​ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್

ಇದೀಗ ಮ್ಯಾಕ್ಸಿ ಕ್ಯಾಚ್ ವೀಡಿಯೋ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಮೆಲ್ಬರ್ನ್ ಸ್ಟಾರ್ಸ್ ತಂಡ ಬ್ರಿಸ್ಬೇನ್ ಹೀಟ್ ವಿರುದ್ಧ 8 ವಿಕೆಟ್‍ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕಿನ ನಡುವೆ ಬಿಬಿಎಲ್ ಲೀಗ್ ನಡೆಯುತ್ತಿದೆ. ಕೆಲದಿನಗಳ ಹಿಂದೆ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಇದೀಗ ಚೇತರಿಸಿಕೊಂಡು ತಂಡದೊಂದಿಗೆ ಮೈದಾನಕ್ಕಿಳಿದಿದ್ದಾರೆ. ಇದನ್ನೂ ಓದಿ: ಮುಂದಿನ ಟೀಂ ಇಂಡಿಯಾ ಟೆಸ್ಟ್‌ ನಾಯಕ ಯಾರು – ಪ್ರತಿಕ್ರಿಯಿಸಿದ ಬಿಸಿಸಿಐ

Share This Article
Leave a Comment

Leave a Reply

Your email address will not be published. Required fields are marked *