ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಅಚ್ಚರಿ ಎಲಿಮಿನೇಷನ್ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಅನ್ನುತ್ತಿರುವಾಗಲೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಿಂದ ಮಾಳು ಔಟಾಗಿದ್ದು, ಸ್ಪಂದನಾ ಸೇಫ್ ಆಗಿದ್ದಾರೆ.
ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಡೇಂಜರ್ ಝೋನ್‌ನಲ್ಲಿದ್ದ ಕಾರಣ ಇಬ್ಬರನ್ನ ಎಲಿಮಿನೇಷನ್ ರೇಸ್‌ನಲ್ಲಿ ಇರಿಸಲಾಗಿತ್ತು. ಇದು ಉಳಿದ ಸ್ಪರ್ಧಿಗಳಲ್ಲೂ ಟೆನ್ಷನ್ ಹೆಚ್ಚಿಸಿತ್ತು. ಇದನ್ನೂ ಓದಿ: ಮಲೇಷಿಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್ – ದಾಖಲೆ ಬರೆದ ದಳಪತಿ ವಿಜಯ್ ಫ್ಯಾನ್ಸ್!
ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಿತು. ಸುದೀಪ್ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಗೌಡ ಅವರು ಬಿಗ್ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲ ಕಾಲ ಫನ್ ಆಕ್ಟಿವಿಟಿ ಮಾಡಿಸಿದ್ರು. ಈ ಬಾರಿ ನಾಮಿನೇಷನ್ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನ ನಾಮಿನೇಷನ್ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನ ಆಡಿಸುವ ಮೂಲಕ ಈ ವಾರ ಬಚಾವಾದವರನ್ನ ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.
ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಉಳಿದುಕೊಂಡರು. ಬಳಿಕ ಬಿಗ್ಬಾಸ್ 2 ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದವು. ಈ ವೇಳೆ ಮನೆ ಮಂದಿಗೆಲ್ಲ ದುಗುಡ ಹೆಚ್ಚಾಗಿತ್ತು, ಯಾರು ಬರ್ತಾರೆ? ಯಾರು ಬರ್ತಾರೆ ಅಂತ ಒಬ್ಬರಿಗೊಬ್ಬರು ಕನವರಿಸುತ್ತಲೇ ಇದ್ದರು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು. ಇದನ್ನೂ ಓದಿ: ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್
ಕಾರಿನಿಂದ ಇಳಿಯುತ್ತಿದ್ದಂತೆ ಒಂದು ಕಡೆ ಸಂತೋಷ, ಮತ್ತೊಂದು ಕಡೆ ದುಃಖವನ್ನೂ ಹೊರ ಹಾಕಿದ್ರು ಕಣ್ಣೀರು ತುಂಬಿಕೊಂಡು ಒಂದು ಕ್ಷಣ ಹಾಗೇ ನಿಂತುಬಿಟ್ಟರು. ಈ ವೇಳೆ ಮನೆ ಮಂದಿ ಕೂಡ ಮಾಳು ಎಲಿಮಿನೇಟ್ ಆಗಿದ್ದನ್ನ ನೆನೆಸಿಕೊಂಡು ಕಣ್ಣೀರಿಟ್ಟರು. ಕೆಲವೇ ಕ್ಷಣಗಳಲ್ಲಿ ಮತ್ತೆ ನಗುತ್ತಾ ನಗುತ್ತಾ ಮನೆಯೊಳಗೆ ಸೇರಿಕೊಂಡರು. ಇದನ್ನೂ ಓದಿ: ಮಗಳ ಬಗ್ಗೆ ಕೆಟ್ಟ ಕಾಮೆಂಟ್ಸ್ – ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್ ವೇಸ್ಟ್ ಮಾಡಲ್ಲ ಎಂದ ಕಿಚ್ಚ ಸುದೀಪ್



