ಬಿಗ್‌ಬಾಸ್ ಸೀಸನ್-12 ವಾರದಿಂದ ವಾರಕ್ಕೆ ಅದ್ಭುತವಾಗಿ ಮೂಡಿಬರುತ್ತಿದೆ. ಈ ಬಾರಿಯ ಟಾಸ್ಕ್‌ಗಳು, ವ್ಯಕ್ತಿತ್ವ ಪರೀಕ್ಷೆ ಟಾಸ್ಕ್ ಮುಂತಾದ ರೀತಿಯಲ್ಲಿ ಸ್ಪರ್ಧಿಗಳು ಕೂಡಾ ಸ್ಟ್ರಾಂಗ್ ಆಗಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾ ಮನರಂಜನೆಯ ಮಹಾಪೂರವನ್ನೇ ಹರಿಸಿದ್ದಾರೆ. ಅದ್ರಲ್ಲೂ ವೀಕೆಂಡ್ ಶೋ ನೋಡಲಂತೂ ಇಡೀ ಕರುನಾಡು ಕಾತುರದಿಂದ ಕಾಯುತ್ತೆ.
ಈ ವಾರ ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಬಿಗ್‌ಬಾಸ್ ಮನೆ ಹೋಟೆಲ್ ಆಗಿ ಪರಿವರ್ತನೆಗೊಂಡಿದೆ. ಬಿಗ್‌ಬಾಸ್ ಸ್ಪರ್ಧಿಗಳು ಸೇವಕರಾಗಿದ್ದಾರೆ. ಮಾಜಿ ಸ್ಪರ್ಧಿಗಳ ಅತಿಥಿ ಸತ್ಕಾರ ಕಾರ್ಯ ನಡೆಯುತ್ತಿದೆ. ಈ ವಾರ ಮನೆಯಲ್ಲಿನ ಚಟುವಟಿಕೆಗಳನ್ನ ನೋಡಿ ಕರುನಾಡು ಮನರಂಜನೆ, ತಮಾಷೆ ನೋಡಿದ್ದಾರೆ. ಜೊತೆಗೆ ಆಗಾಗ ಗಿಲ್ಲಿಯನ್ನ ಟಾರ್ಗೆಟ್ ಮಾಡಿದ ರೀತಿಗೆ ಕಿಡಿ ಕೂಡಾ ಕಾರಿದ್ದಾರೆ.
ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಆಗಮಿಸಿರುವ ರಜತ್ ಕಿಶನ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ, ತ್ರಿವಿಕ್ರಂ ಅವರ ವರಸೆ ಬದಲಾಗಿದೆ. ಅತಿಥಿಗಳಾಗಿ ಆಗಮಿಸಿ ಸೇವೆ ಮಾಡಿಸಿಕೊಳ್ಳುತ್ತಾ ಕೆಣಕಿ ತಮಾಷೆ ಮಾಡುತ್ತಿದ್ದ ಮಾಜಿ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಬಿಗ್‌ಬಾಸ್ ತಮ್ಮ ಜೀವನಕ್ಕೆ ಎಷ್ಟು ಪ್ರಮುಖವಾಯ್ತು ಎನ್ನುವ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟಿದ್ದಾರೆ. ತಮಗಿದ್ದ ಕಳಂಕವನ್ನ ಬಿಗ್‌ಬಾಸ್ ಹೊಡೆದೋಡಿಸಿದ್ದು ಹೇಗೆ ಅಂತಾ ವಿವರಿಸಿದ್ದಾರೆ.



