‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಹನುಮಂತ (Hanumantha) ಗೆದ್ದಿರೋದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದರ ನಡುವೆ ಸಂಗಾತಿ ಬಗ್ಗೆ ಮಾತನಾಡಿದ ಹನುಮಂತ, ನಾನು ಬಿಗ್ ಬಾಸ್ ಗೆದ್ದಿದ್ದು ನಮ್ ಹುಡುಗಿಗೆ ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ಮಗನ ಕೊನೆ ಶೋ ನೋಡಲು ಬಿಗ್ ಬಾಸ್ ಮನೆಗೆ ಬಂದಿದ್ದ ಸುದೀಪ್ ತಂದೆ
ಉತ್ತರಕರ್ನಾಟಕದ ಕಡೆ ನಾನು ಮೊದಲು ಬಿಗ್ ಬಾಸ್ ಗೆದ್ದಿದ್ದು ಅಂತ ತಿಳಿದು ಖುಷಿಯಾಯ್ತು. ನಾನು ಗೆದ್ದಿದ್ದಕ್ಕೆ ಊರಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ ಎಂದು ಹನುಮಂತ ಮಾತನಾಡಿದ್ದಾರೆ. ಇದನ್ನೂ ಓದಿ:ನಾನು ಗೆದ್ದಿಲ್ಲ, ಕರ್ನಾಟಕದ ಜನತೆ ಮತ ಹಾಕಿ ಗೆಲ್ಲಿಸಿದ್ದಾರೆ: BBK 11 ವಿನ್ನರ್ ಹನುಮಂತ
ಹನುಮಂತ ಮುಂದುವರಿದು, ನಾನು ಬಿಗ್ ಬಾಸ್ ಗೆದ್ದಿರೋದು ನೋಡಿ ಬಹಳ ಖುಷಿಪಟ್ಟಳು. ನಮ್ ಹುಡುಗಿ ಅಳಾಕತ್ತಿದ್ಲು ನಾನೇ ಸಮಾಧಾನ ಮಾಡಿದೆ ಎಂದರು. ಆಗ ತ್ರಿವಿಕ್ರಮ್ ಮಾತನಾಡಿ ಕಾಸು ತಂದಿದ್ದೀನಿ, ಮದುವೆಯಾಗುತ್ತೀನಿ. ತಲೆ ಕೆಡಿಸಿಕೊಳ್ಳಬೇಡ ಅಂತ ಹನುಮಂತಗೆ ಕಾಲೆಳೆದಿದ್ದಾರೆ. ಹುಡುಗಿಯ ಬಗ್ಗೆ ಮಾತನಾಡಿತ್ತೊದ್ದಂತೆ ಅವರು ನಾಚಿ ನೀರಾಗಿದ್ದಾರೆ.
ಇನ್ನೂ ‘ಬಿಗ್ ಬಾಸ್’ ಶೋ ಗೆದ್ದ 50 ಲಕ್ಷ ರೂ.ನಲ್ಲಿ ಮನೆ ಕಟ್ಟಿಸುತ್ತೇನೆ. ಜೊತೆ ಮದುವೆ ಆಗುತ್ತೇನೆ. ನಮಗೆ ತಗಡಿನ ಮನೆಯಿದೆ ಅದನ್ನು ತೆಗೆಯಿಸಿ, ಸ್ಲ್ಯಾಬ್ ಮನೆ ಕಟ್ಟಿಸುತ್ತೇನೆ ಎಂದು ಹನುಮಂತ ಮಾತನಾಡಿದ್ದಾರೆ.
ಬರೋದು ಬಂದು ಬಿಟ್ಟಿದ್ದೇ, ಏನಾದರೂ ಆಗಲಿ ಅಂತ ನಿಂತುಬಿಟ್ಟಿದ್ದೆ. ಬರುವಾಗ ಬಂದೇ ಖಾಲಿ, ಹೋಗುವಾಗ ಖಾಲಿ, ಇರೋ ಮಟ ಜಾಲಿ ಜಾಲಿ ಎಂದು ಸುದ್ದಿಗೋಷ್ಠಿಯಲ್ಲಿ ಹನುಮಂತ ಹಾಡಿದ್ದಾರೆ. ಈ ಮೂಲಕ ಗೆಲುವಿಗಾಗಿ ತಾವು ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ನಾನು ಹೇಗೆ ಇದ್ದೆನೋ ಹಾಗೇ ಆಡಿದ್ದೇನೆ ಎಂದಿದ್ದಾರೆ.