‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರಿಯಾಲಿಟಿ ಶೋ ಹನುಮಂತ (Hanumantha) ವಿನ್ನರ್ ಆಗಿ ಗೆದ್ದು ಬೀಗಿರೋದು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹುಟ್ಟೂರಾದ ಹಾವೇರಿಯಲ್ಲಿಯೂ ಹನುಮಂತ ಗೆದ್ದ ಸಂಭ್ರಮದಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹೀಗಿರುವಾಗ ಮಗ ಬಿಗ್ ಬಾಸ್ ಗೆದ್ದ ಖುಷಿಯನ್ನು ಹನುಮಂತ ತಂದೆ ಮೇಘಪ್ಪ ಹಂಚಿಕೊಂಡಿದ್ದಾರೆ. ಮಗನ ಮದುವೆಗೆ ಸುದೀಪ್ (Sudeep) ಸರ್‌ನ ಕರೆಯುತ್ತೇವೆ ಎಂದಿದ್ದಾರೆ.
ಹನುಮಂತನ ತಂದೆ ಮಾತನಾಡಿ, ಮಗನ ಸಾಧನೆ ನೋಡಿರೋದು ನಮಗೆ ದೊಡ್ಡ ಖುಷಿ. ನನ್ನ ಮಗ ಗೆಲ್ಲುತ್ತಾನೆ ಎಂದು ಅಂದುಕೊಂಡಿರಲಿಲ್ಲ. 5 ಕೋಟಿಗೂ ಅಧಿಕ ಮತ ಪಡೆದು ಗೆದ್ದಿರೋದು ಖುಷಿಯಿದೆ. ಇದು ಹನುಮಂತನ ಗೆಲುವು ಅಲ್ಲ. ಕರುನಾಡಿನ ಜನರ ಗೆಲುವು ಎಂದಿದ್ದಾರೆ. ಇದನ್ನೂ ಓದಿ:‘ದೋಸ್ತಾ ನೀ ಮಸ್ತಾ’: ಗೆಳೆಯನ ಗೆಲುವುವನ್ನು ಸಂಭ್ರಮಿಸಿದ ಧನರಾಜ್ ಆಚಾರ್
ಈ ವೇಳೆ, ಹನುಮಂತನ ಮದುವೆ ಬಗ್ಗೆ ಮಾತನಾಡಿ ಮೊದಲು ಹುಡುಗಿಯನ್ನು ನೋಡೋಣ. ಆ ನಂತರ ಮಾತುಕತೆ ಮಾಡೋಣ ಎಂದಿದ್ದಾರೆ. ನಮ್ಮ ಮನೆ ಮುಂದೆ ಮದುವೆ ಮಾಡುತ್ತೇವೆ. ಆದರೆ ಎಲ್ಲೂ ಹುಡುಗಿ ಯಾರು ಎಂಬ ಮಾಹಿತಿ ಕೊಟ್ಟಿಲ್ಲ. ಇನ್ನೂ ಸುದೀಪ್ ಸರ್‌ನ ಬಹಳ ಹತ್ತಿರದಿಂದ ನೋಡಿ ಖುಷಿಯಾಯ್ತು. ಮಗನ ಮದುವೆಗೆ ಸುದೀಪ್ ಸರ್‌ನ ಹೇಳುತ್ತೇವೆ ಎಂದು ತಂದೆ ಮೇಘಪ್ಪ ಹೇಳಿದ್ದಾರೆ.
ಹನುಮಂತನಿಗೆ ಮನೆ ಕಟ್ಟಬೇಕು ಅಂತ ಆಸೆ ಇದೆ. ನೋಡೋಣ ಎಂದು ಕೂಡ ಮಾತನಾಡಿದ್ದಾರೆ. ಅವರ ಕನಸುಗಳು ಈಡೇರಲಿ ಎಂದಿದ್ದಾರೆ.