ಕನ್ನಡ ‘ಬಿಗ್ ಬಾಸ್’ ಸೀಸನ್ 11ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 97 ದಿನಗಳು ಪೂರೈಸಿರುವ ಬಿಗ್ ಬಾಸ್ ಆಟ ಇನ್ನೆಷ್ಟು ದಿನಗಳು ಇರಲಿದೆ ಎಂಬುದನ್ನು ಸುದೀಪ್ ದೊಡ್ಮನೆ ವೇದಿಕೆಯಲ್ಲಿ ತಿಳಿಸಿದ್ದಾರೆ. ಫಿನಾಲೆ ಬಗ್ಗೆ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 97 ದಿನಗಳು ಪೂರೈಸಿರುವ ಈ ಆಟಕ್ಕೆ ಅಂತ್ಯ ಯಾವಾಗ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ಅಮೆರಿಕದಲ್ಲಿ ಸರ್ಜರಿ ನಂತರ ಡಿಸ್ಚಾರ್ಜ್ ಆದ ನಟ ಶಿವಣ್ಣ
View this post on Instagram
ಸುದೀಪ್ (Sudeep) ವೇದಿಕೆಯಲ್ಲಿ ಹೇಳಿರುವಂತೆ ಇನ್ನೂ ಫಿನಾಲೆಗೆ ಇನ್ನು ಮೂರು ವಾರ ಇದೆ. ಅಂದರೆ ಇನ್ನು 21 ದಿನದಲ್ಲಿ ಫಿನಾಲೆ ನಡೆದು ಈ ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆ ಸುದೀಪ್ ಅವರ ಪಯಣವೂ ಅಂತ್ಯವಾಗಲಿದೆ.
ಅಂದಹಾಗೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲ. ಫ್ಯಾಮಿಲಿ ರೌಂಡ್ ಆಗಿದ್ದ ಹಿನ್ನೆಲೆ ವೋಟಿಂಗ್ ಲೈನ್ ಕ್ಲೋಸ್ ಇತ್ತು. ಹಾಗಾಗಿ ಮುಂದಿನ ವಾರ ಡಬಲ್ ಎಲಿಮಿನೇಷನ್ ಅಥವಾ ಮಿಡ್ ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. 9 ಸ್ಪರ್ಧಿಗಳಿರುವ ಮನೆಯಲ್ಲಿ ಫಿನಾಲೆಗೆ 5 ಮಂದಿಯಷ್ಟೇ ಆಯ್ಕೆಯಾಗಲಿದ್ದಾರೆ. ಉಗ್ರಂ ಮಂಜು, ಗೌತಮಿ, ಭವ್ಯಾ, ತ್ರಿವಿಕ್ರಮ್, ಚೈತ್ರಾ, ಮೋಕ್ಷಿತಾ, ರಜತ್, ಧನರಾಜ್, ಹನುಮಂತ ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾವ 5 ಸ್ಪರ್ಧಿಗಳಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಯಾರು ಬಿಗ್ ಬಾಸ್ ವಿನ್ನರ್ ಪಟ್ಟ ಗೆಲ್ತಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.