ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ

Public TV
1 Min Read
akshitha rajath

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಸ್ಪರ್ಧಿ ರಜತ್ ಕಿಶನ್ (Rajath Kishen) ಅವರ ಪತ್ನಿ ಅಕ್ಷಿತಾ (Akshitha)  ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಭಾಗಿಯಾಗಿ‌ ಅಕ್ಷಿತಾಗೆ ಶುಭಕೋರಿದ್ದಾರೆ.

rajath

ಬಿಗ್ ಬಾಸ್, ರಾಜ ರಾಣಿ ಶೋಗಳ ಮೂಲಕ ಗಮನ ಸೆಳೆದಿರುವ ರಜತ್ ಕಿಶನ್ ಅವರು ತಮ್ಮ ಪತ್ನಿ ಅಕ್ಷಿತಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸದಾ ತಮ್ಮ ಪತ್ನಿಗೆ ಸಿಐಡಿ ಎಂದು ಕರೆಯುವ ರಜತ್, ಅದೇ ಥೀಮ್‌ನಲ್ಲೇ ಬರ್ತ್‌ಡೇ ಆಯೋಜಿಸಿ ಸಖತ್ ಆಗಿ ಸರ್ಪ್ರೈಸ್ ಕೊಟ್ಟಿದ್ದಾರೆ.

bhavya gowda

ರಜತ್ ಪತ್ನಿಯ ಹುಟ್ಟುಹಬ್ಬಕ್ಕೆ ಭವ್ಯಾ ಗೌಡ, ಶಿಶಿರ್, ಮೋಕ್ಷಿತಾ ಪೈ, ಉಗ್ರಂ ಮಂಜು, ಅನುಷಾ ರೈ, ಧನರಾಜ್ ಆಚಾರ್, ವಿನಯ್ ಗೌಡ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

‘ಬಿಗ್ ಬಾಸ್ ಕನ್ನಡ 11’ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರೂ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಠಕ್ಕರ್ ಕೊಟ್ಟಿದ್ದರು. ಫಿನಾಲೆಯಲ್ಲಿ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಅವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ ರಜತ್. ಈ ಶೋ ಮೂಲಕ ಮತ್ತೆ ಚೈತ್ರಾ ಕ್ವಾಟ್ಲೆ ಕೊಡುತ್ತಾ ನೋಡುಗರಿಗೆ ಮನರಂಜನೆ ನೀಡುತ್ತಿದ್ದಾರೆ.

Share This Article