‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಅದ್ಧೂರಿಯಾಗಿ ತೆರೆಬಿದ್ದಿದೆ. 3ನೇ ರನ್ನರ್ ಅಪ್ ಆಗಿರುವ ಮೋಕ್ಷಿತಾ ಪೈ (Mokshitha Pai) ಇದೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್- ಫ್ಯಾನ್ಸ್‌ಗೆ ಕಾದಿದ್ಯಾ ಸರ್ಪ್ರೈಸ್?
View this post on Instagram
‘ಪಾರು’ ಸೀರಿಯಲ್‌ನಲ್ಲಿ ಸಹೋದರನಾಗಿ ನಟಿಸಿದ್ದ ಗಗನ್ ದೀಪ್ ಜೊತೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮೋಕ್ಷಿತಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌ಗೆ ಫೋಟೋಗೆ ಪೋಸ್ ನೀಡಿದ್ದಾರೆ.
View this post on Instagram
ಇನ್ನೂ ಬಿಗ್ ಬಾಸ್ ಶೋ ಮುಗಿದ ಬಳಿಕ ‘ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿ, ಜಿಲೇಬಿ ಕಳ್ಳಿ ಅಲ್ಲ, ಮಕ್ಕಳ ಕಳ್ಳಿ ಎಂಬ ಟ್ರೋಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾನು ನಿರಪರಾಧಿ ಎಂದು ಸಾಬೀತಾಗಿದೆ. ಮತ್ತೆ ಅದನ್ನೇ ಇಟ್ಟುಕೊಂಡು ಟ್ರೋಲ್ ಮಾಡ್ತಾರೆ ಅಂದ್ರೆ ಏನು ಹೇಳೋಕಾಗಲ್ಲ. ನಿರಪರಾಧಿ ಎಂದು ಸಾಬೀತಾದ ಮೇಲೆ ಮತ್ತೆ ಅದನ್ನು ಕೆದಕಿ ಮಾತಾಡಲ್ಲ ಎಂದು ಮಾತನಾಡಿದರು.
ಟ್ರೋಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಾನಂತೂ ತೊಂದರೆ ಕೊಡಲ್ಲ. ಯಾಕಂದ್ರೆ ಆ ನೋವು ನನಗೆ ಗೊತ್ತಿದೆ. ಅವರಿಗೆ ಅದೇ ರೀತಿ ತೊಂದರೆ ಕೊಡೋಕೆ ಇಷ್ಟಪಡಲ್ಲ. ವಿವ್ಸ್‌ಗೋಸ್ಕರನೋ ಎನೋ ಒಂದು ಮಾಡಿದ್ದಾರೆ. ನನ್ನ ಹತ್ರ ನಿರಪರಾಧಿ ಎಂಬ ಸರ್ಟಿಫಿಕೆಟ್ ಇದೆ.
ಬಿಗ್ ಬಾಸ್ ಸಮಯದಲ್ಲೇ ಮಾಡಿದ್ದು ವೋಟಿಗೋ ಎನೋ ಗೊತ್ತಿಲ್ಲ. ಆಗ ನನ್ನ ಫ್ಯಾನ್ಸ್ ನನ್ನ ಜೊತೆಗೆ ಸ್ಟ್ರಾಂಗ್ ಆಗಿ ನಿಂತ್ರು. ನನಗೆ ಎಷ್ಟು ಬೆಂಬಲ ಇದೆ ಎಂಬುದು ಗೊತ್ತಾಯ್ತು, ಅಷ್ಟು ಸಾಕು ಎಂದಿದ್ದಾರೆ.