‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿಗಳಾದ ಐಶ್ವರ್ಯಾ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ (Mokshitha Pai) ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ (Kollur Mookambika Temple) ಭೇಟಿ ನೀಡಿದ್ದಾರೆ. ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್
ಜನವರಿ ಅಂತ್ಯದಲ್ಲಿ ‘ಬಿಗ್ ಬಾಸ್’ ಶೋಗೆ ಬ್ರೇಕ್ ಬಿದ್ದಿತ್ತು. ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಿದ್ದ ಸ್ಪರ್ಧಿಗಳು ಇದೀಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಮೋಕ್ಷಿತಾ, ಶಿಶಿರ್ (Shishir), ಐಶ್ವರ್ಯಾ (Aishwarya) ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇತ್ತೀಚೆಗೆ ಕೊಡಗಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ರಂಜಿತ್ ಅವರ ಎಂಗೇಜ್‌ಮೆಂಟ್ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಐಶ್ವರ್ಯಾ, ಮೋಕ್ಷಿತಾ, ಶಿಶಿರ್, ಭವ್ಯಾ ಗೌಡ, ಅನುಷಾ ರೈ ಭಾಗಿಯಾಗಿ ಶುಭಕೋರಿದ್ದರು.