ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು ಎಂದ ಚೈತ್ರಾ ಕುಂದಾಪುರ
‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ (Chaithra Kundapura) ಮದುವೆ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಚಕಾರವೆತ್ತಿದ್ದಾರೆ. ಮದುವೆಗೆ ತನ್ನನ್ನು ಕರೆದಿಲ್ಲ ಮಾಧ್ಯಮದ ಮುಂದೆ ತಂದೆ ಕಿಡಿಕಾರಿದ್ದರು. ತಂದೆಯ ಆರೋಪಕ್ಕೆಲ್ಲಾ ಚೈತ್ರಾ ತಿರುಗೇಟು ನೀಡಿದ್ದಾರೆ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ ಎಂದು ಕುಡುಕ ತಂದೆಯ ಚಿತ್ರ ಹಿಂಸೆ ಎಂದು ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ
ಚೈತ್ರಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಅಂತ ಬರೆದುಕೊಳ್ಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ:ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು- ಮಗಳ ಮದುವೆಗೆ ತಂದೆ ಆಕ್ಷೇಪ
ಹೆತ್ತ ಮಗಳನ್ನು ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡ್ತಿಗೆ ಹೊಡೆದು ಚಿತ್ರಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನು ಇಲ್ಲ. ಎಲ್ಲಾ ಮುಗಿದ್ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು ವಾವ್ ಎಂದು ತಂದೆಯ ವಾಗ್ದಾಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ ನೀಡಿದ್ದಾರೆ.
ಮೇ 9ರಂದು ಶ್ರೀಕಾಂತ್ ಜೊತೆ ಚೈತ್ರಾ ಅವರು ಕುಂದಾಪುರದಲ್ಲಿ ಹಸೆಮಣೆ ಏರಿದರು. 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.