‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಪವಿ ಪೂವಪ್ಪ (Pavi Poovappa) ಅವರು ಮೊದಲ ಬಾರಿಗೆ ತಮ್ಮ ಲವ್ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾಯಿ ವಿಚಾರಕ್ಕೆ ಬಾಯ್‌ಫ್ರೆಂಡ್ ಡಿಜೆ ಮ್ಯಾಡಿ ಅವರೊಂದಿಗೆ ಬ್ರೇಕಪ್ (Breakup) ಮಾಡಿಕೊಂಡಿದ್ದರ ಬಗ್ಗೆ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

View this post on Instagram
ಬ್ರೇಕಪ್ ಮಾಡಿಕೊಳ್ಳುವ ಉದ್ದೇಶದಿಂದಲೇ ನಾಯಿ ವಿಚಾರ ಹೇಳಿ ಹೀಗೆ ಮಾಡಿದರಬಹುದು. ಬಹುಶಃ ಅವರಿಗೆ ಮದುವೆ ಆದಮೇಲೆ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ನಾಯಿ ಕಾರಣ ಕೊಟ್ಟು ಬ್ರೇಕಪ್ ಮಾಡಿಕೊಂಡಿದ್ದಾರೆ. ಇದಾಗಿ 8 ತಿಂಗಳುಗಳಾಗಿದೆ. ಎರಡು ದಿನದ ಹಿಂದೆ ನಾನು ಅವರನ್ನು ನೋಡಿದೆ ಎನ್ನುತ್ತಾ ಪವಿ ಪೂವಪ್ಪ ಗಳಗಳನೆ ಅತ್ತಿದ್ದಾರೆ. ಆಗ `ಭರ್ಜರಿ ಬ್ಯಾಚುಲರ್ಸ್’ ತಂಡದವರು ಅವರನ್ನು ಸಂತೈಸಿದ್ದಾರೆ.
View this post on Instagram
‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು. ಇದೀಗ ‘ಭರ್ಜರಿ ಬ್ಯಾಚುಲರ್ 2’ ಉಲ್ಲಾಸ್‌ಗೆ ಪವಿ ಮೆಂಟರ್ ಆಗಿದ್ದಾರೆ.

