ನವದೆಹಲಿ: ಇಂಡಿಯಾ ದಿ ಮೋದಿ ಕ್ವೆಸ್ಶನ್ (India: The Modi Question) ಸಾಕ್ಷ್ಯಚಿತ್ರದ ವಿರುದ್ಧ ಬಿಜೆಪಿ (BJP) ನಾಯಕ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿರುವ ಮಾನನಷ್ಟ (Defamation) ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಬಿಬಿಸಿಗೆ (BBC) ಸಮನ್ಸ್ (Summons) ಜಾರಿ ಮಾಡಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರುಚಿಕಾ ಸಿಂಗ್ಲಾ ಅವರ ಪೀಠವು ವಿಕಿಮೀಡಿಯಾ (Wikimedia) ಮತ್ತು ಇಂಟರ್ನೆಟ್ ಆರ್ಕೈವ್ (Internet Archiv) ಎಂಬ ಅಮೆರಿಕ ಮೂಲದ ಡಿಜಿಟಲ್ ಲೈಬ್ರರಿಗೆ ಸಮನ್ಸ್ ನೀಡಿದೆ. ಅಲ್ಲದೆ 30 ದಿನಗಳ ಒಳಗಾಗಿ ಲಿಖಿತ ಉತ್ತರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಪ್ರತಿಭಟನಾ ನಿರತ ಕುಸ್ತಿಪಟುಗಳು, ಪೊಲೀಸರ ನಡುವೆ ಸಂಘರ್ಷ – ಹಲ್ಲೆ ಆರೋಪ
Advertisement
Advertisement
ಸಾಕ್ಷ್ಯಚಿತ್ರವು ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ರಾಷ್ಟ್ರದಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಮಾರ್ಥ್ಯ ಹೊಂದಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಬೆಳೆಸುವ ಅಂಶಗಳನ್ನು ಸಾಕ್ಷ್ಯಚಿತ್ರಕ್ಕೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರವನ್ನು ನಿಷೇಧಿಸಿದೆ. ಆದರೂ ಸಹ ಸಾಕ್ಷ್ಯಾಚಿತ್ರದ ಸರಣಿಯನ್ನು ವೀಕ್ಷಿಸಲು ವಿಕಿಪೀಡಿಯ ಲಿಂಕ್‍ನ್ನು ಒದಗಿಸಿದೆ. ಅಲ್ಲದೆ ಇಂಟರ್ನೆಟ್ ಆರ್ಕೈವ್‍ನಲ್ಲಿ ಇನ್ನೂ ಸಾಕ್ಷ್ಯಚಿತ್ರ ಲಭ್ಯವಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Advertisement
ಜಾಖರ್ಂಡ್ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಬಿನಯ್ ಕುಮಾರ್ ಸಿಂಗ್, ವಕೀಲ ಮುಖೇಶ್ ಶರ್ಮಾ ಅವರ ಮೂಲಕ ಸಾಕ್ಷ್ಯಾಚಿತ್ರದ ವಿರುದ್ಧ ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರವು ಆರ್‍ಎಸ್‍ಎಸ್ (RSS), ವಿಎಚ್‍ಪಿ (VHP) ಮತ್ತು ಬಿಜೆಪಿಗೆ ಮಾನನಷ್ಟವಾಗುವಂತಹ ವಿಚಾರಗಳಿವೆ ಎಂದು ಆರೋಪಿಸಲಾಗಿತ್ತು.
Advertisement
ಸಾಕ್ಷ್ಯಚಿತ್ರ ದುರುದ್ದೇಶದಿಂದ ಕೂಡಿದೆ. ಇಂತಹ ಆಧಾರರಹಿತ ಆರೋಪಗಳು ಆರ್‍ಎಸ್‍ಎಸ್ ಹಾಗೂ ವಿಎಚ್‍ಪಿಯಂತಹ ಸಂಸ್ಥೆಗಳ ಗೌರವಕ್ಕೆ ಧಕ್ಕೆ ತರುತ್ತದೆ. ಇದು ಭಾರತದ ಸಾಂಸ್ಕøತಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಮಾಡುವ ಅವಮಾನ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ನ್ಯಾಯಾಲಯವೂ ಪ್ರಕರಣದ ವಿಚಾರಣೆಯನ್ನು ಮೇ 11ಕ್ಕೆ ಮುಂದೂಡಿದೆ. ಇದನ್ನೂ ಓದಿ: ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಹತ್ಯೆ – ಜಮ್ಮುವಿನಲ್ಲಿ ಹೈ ಅಲರ್ಟ್