ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಕಿರುತೆರೆಗೆ ಎಂಟ್ರಿ ಕೊಟ್ಟು ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ದಾಂಪತ್ಯ ಜೀವನ ಮತ್ತು ಸಿನಿಮಾ ಬದುಕು ಎರಡನ್ನು ನಿಭಾಯಿಸಿಕೊಂಡು ಹೋಗ್ತಿದ್ದಾರೆ. ನನ್ನ ಬದುಕಿನ ಶಕ್ತಿ ನೀವು ಎಂದು ಪತಿಗೆ ಯಶಸ್‌ಗೆ (Yashas Patla) ವಿಶೇಷವಾಗಿ ಶುಭಕೋರಿದ್ದಾರೆ.
ಪ್ರೀತಿಯ ಯಶು, ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವದವರು. ಮೌನಕ್ಕೂ ಅರ್ಥವಿದೆ ಎಂದು ತಿಳಿಸಿ ಕೊಟ್ಟ ಪ್ರೀತಿಯ ಗೆಳೆಯ ನೀವು. ನನ್ನ ಬದುಕಿನ ಶಕ್ತಿ ನೀವು ಎಂದು ಅದಿತಿ ಪ್ರಭುದೇವ ಪೋಸ್ಟ್ ಮಾಡಿದ್ದಾರೆ. ಆ ದೇವರು ಪ್ರಪಂಚದ ಎಲ್ಲಾ ಸುಖವನ್ನು, ನೆಮ್ಮದಿಯನ್ನು ನಿಮಗೆ ನೀಡಲಿ ಕಂದ. ಹಾಗೆಯೇ ನಾವಿಬ್ರೂ ಯಾವಾಗಲೂ ಹೀಗೆ ಒಟ್ಟಿಗೆ ಕಷ್ಟ ಸುಖದಲ್ಲಿ ಒಂದಾಗಿ, ಜೊತೆಯಾಗಿ ಬೆಳೆದು ಸಾಧನೆ, ನೆಮ್ಮೆದಿಯತ್ತ ಹೆಜ್ಜೆ ಹಾಕೋಣ ಎಂದು ನಟಿ ಪತಿಗೆ ವಿಶ್ ಮಾಡಿದ್ದಾರೆ.
View this post on Instagram
ನಿಮಗೆ ನೆನಪಿದೆಯಾ ಕಳೆದ ವರ್ಷ ಇದೇ ದಿವಸ ನೀವು ತಂದೆಯಾಗುವ ಸುದ್ದಿಯನ್ನು ನೀಡಿದೆ. ಈ ವರ್ಷ ನಾವು ಇಬ್ಬರಲ್ಲ ಮೂವರು. ಈ ವರ್ಷದ ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಮಗಳೇ ನಾನು ನಿಮಗೆ ನೀಡಿರುವ ಮುದ್ದಾದ ಉಡುಗೊರೆ. ಏನಂತೀರಾ?? ಎಲ್ಲದಕ್ಕೂ ಧನ್ಯವಾದಗಳು. ಹ್ಯಾಪಿ ಬರ್ತ್ಡೇ ಎಂದು ನಟಿ ಬರೆದುಕೊಂಡಿದ್ದಾರೆ.
ಅಂದಹಾಗೆ, ಬಜಾರ್ ಸಿನಿಮಾ ನಟಿ ಅದಿತಿ 2022ರಲ್ಲಿ ಉದ್ಯಮಿ ಯಶಸ್ ಪಾಟ್ಲಾ ಜೊತೆ ಮದುವೆಯಾದರು. ಇದೀಗ ಮುದ್ದು ಮಗಳ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.