ಅಬ್ಬಾ! 25 ವರ್ಷಗಳ ಹಳೆಯ ಶೂ 18 ಕೋಟಿಗೆ ಹರಾಜು

Public TV
1 Min Read
Michael Jordan Shoes 2

ವಾಷಿಂಗ್ಟನ್‌: ಬಾಸ್ಕೆಟ್‌ಬಾಲ್ ದಂಥಕತೆ ಅಮೆರಿಕದ ಮೈಕಲ್ ಜೋರ್ಡನ್ (Michael Jordan) ಅವರು 1998ರ ಎನ್‌ಬಿಎ ಟೂರ್ನಿಯ ಫೈನಲ್ (NBA Finals) ಪಂದ್ಯದಲ್ಲಿ ಧರಿಸಿದ್ದ ಶೂ (Shoes) ಹರಾಜಿನಲ್ಲಿ ದಾಖಲೆಯ 18 ಕೋಟಿ ರೂ.ಗೆ ಮಾರಾಟವಾಗಿದೆ.

Michael Jordan

ಎನ್‌ಬಿಎ ಜೋರ್ಡನ್ ಅವರ ವೃತ್ತಿಜೀವನದ ಕೊನೆಯ ಟೂರ್ನಿ ಆಗಿತ್ತು. ಷಿಕಾಗೊ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು ಯೂಟಾ ಜಾಝ್ ತಂಡದ ವಿರುದ್ಧದ ಫೈನಲ್‌ನಲ್ಲಿ 37 ಪಾಯಿಂಟ್ಸ್ ಕಲೆಹಾಕಿದ್ದರು. ಇದರಿಂದ ಬುಲ್ಸ್ ತಂಡ 93-88 ಪಾಯಿಂಟ್ಸ್‌ಗಳಿಂದ ಜಯಿಸಿತ್ತು. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

Michael Jordan Shoes

ಆ ಪಂದ್ಯದಲ್ಲಿ ಜೋರ್ಡನ್ ವಿವಿಧ ಶೂಗಳನ್ನೂ ಧರಿಸಿದ್ದರು. ಅವರು ಕೊನೆಯದಾಗಿ ಧರಿಸಿದ್ದ ಶೂಗಳನ್ನ ಹರಾಜಿಗೆ ಇಡಲಾಗಿತ್ತು ಎಂದು ನ್ಯೂಯಾರ್ಕ್‌ನ ಸೋದೆಬೀಸ್ ಹರಾಜು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

ಸೋದೆಬೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ಶೂಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಅಮೆರಿಕದ ಗಾಯಕ ಕಾವ್ಯ ವೆಸ್ಟ್ ಅವರ ಶೂಗಳು 2021ರ ಹರಾಜಿನಲ್ಲಿ 14.74 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದ್ದು ದಾಖಲೆಯಾಗಿತ್ತು.

Michael Jordan Shoes 1

ಜೋರ್ಡನ್ ಅವರು 1998ರ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ 2022ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ 82 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿತ್ತು.

Share This Article