ಬೆಂಗಳೂರು: ಹಾವೇರಿ (Haveri) ಲೋಕಸಭಾ ಟಿಕೆಟ್ (General Elections 2024) ವಿಚಾರಕ್ಕೆ ಯಡಿಯೂರಪ್ಪ (B. S. Yediyurappa) ಅವರನ್ನು ದೂರಬಾರದು. ಕೇಂದ್ರದ ವರಿಷ್ಠರು ಎಲ್ಲಾ ಸರ್ವೆ ವರದಿಗಳನ್ನು ಪಡೆದು, ನೀನು ನಿಲ್ಲಲೇಬೇಕು ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.
ಹಾವೇರಿಯಿಂದ ಸ್ಪರ್ಧೆಗೆ ಬಲವಂತವಾಗಿ ಯಡಿಯೂರಪ್ಪ ಒಪ್ಪಿಸಿದ್ದು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪಾರ್ಲಿಮೆಂಟರಿ ಬೋರ್ಡ್‍ನಲ್ಲೂ ನನ್ನ ಹೆಸರು ಕ್ಲೀಯರ್ ಆಗಿರಲಿಲ್ಲ. ಅಮಿತ್ ಶಾ ಹಾಗೂ ನಡ್ಡಾ ಸಭೆಯಲ್ಲಿ ತೀರ್ಮಾನ ಆಗಿತ್ತು. ಪ್ರಧಾನ ಮಂತ್ರಿ ಏನು ತೀರ್ಮಾನ ಮಾಡ್ತಾರೆ ಅದರಂತೆ ನೀನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ಅದರಂತೆ ನಾನು ಇವಾಗ ಚುನಾವಣೆ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಈಶ್ವರಪ್ಪ ಗರಂ – ಶಿವಮೊಗ್ಗದಿಂದ ಕಾಂತೇಶ್ ಸ್ಪರ್ಧೆ?
- Advertisement -
- Advertisement -
ನನ್ನ ಆರೋಗ್ಯ ಖಂಡಿತವಾಗಿಯೂ ಅಷ್ಟೊಂದು ಚೆನ್ನಾಗಿಲ್ಲ. ಜವಬ್ದಾರಿ ಬಂದಾಗ ಅದನ್ನು ನಿಭಾಯಿಸುವ ಶಕ್ತಿ ನನಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
ಹಾವೇರಿ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್‍ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಇದೀಗ ಮಗನಿಗೆ ಟಿಕೆಟ್ ಕೈ ತ್ಪಪಿದ್ದು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಇಡೀ ಜಿಲ್ಲೆಗೆ ಖುಷಿಯಾಗಿದೆ: ಜಿ.ಎಂ ಸಿದ್ದೇಶ್ವರ್