DistrictsKalaburagiKarnatakaKoppalLatestMain Post

ಪಿಎಸ್‍ಐ ಅಕ್ರಮ ಕೇಸ್‍ಗೆ ಟ್ವಿಸ್ಟ್ – ಲಂಚ ಪಡೆದ ಬಿಜೆಪಿ ಶಾಸಕರ ಆಡಿಯೋ ವೈರಲ್

ಕೊಪ್ಪಳ: ಪಿಎಸ್‍ಐ ನೇಮಕಾತಿ ಅಕ್ರಮದ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಗೋಲ್‍ಮಾಲ್‍ನಲ್ಲಿ ಇಷ್ಟು ದಿನ ಅಧಿಕಾರಿಗಳು, ಅಭ್ಯರ್ಥಿಗಳ ಹೆಸರು ಕೇಳಿ ಬಂದಿತ್ತು. ಇದೀಗ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿ ಬಂದಿದೆ.

ಪ್ರಕರಣ ಸಂಬಂಧ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರ್ ಆಡಿಯೋ ವೈರಲ್ ಆಗಿದೆ. ಪಿಎಸ್‍ಐ ಮಾಡಿಸ್ತೀನಿ ಎಂದು 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ದಡೇಸೂಗೂರ್ ಎದುರಿಸುತ್ತಿದ್ದಾರೆ. ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್‌ ಪರಸಪ್ಪ ಎಂಬುವವರ ಮಗನ ನೇಮಕಾತಿಗೆ ಹಣ ಪಡೆದಿದ್ದನ್ನು, ಸರ್ಕಾರಕ್ಕೆ ಆ ಹಣ ತಲುಪಿಸಿದ್ದೇನೆ ಎಂಬುದನ್ನು ಆಡಳಿತ ಪಕ್ಷದ ಶಾಸಕರು ಫೋನ್ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ರಾಜಪಥಕ್ಕೆ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲು ಕೇಂದ್ರ ನಿರ್ಧಾರ

ಹಣಕೊಟ್ಟ ಪರಸಪ್ಪ ಹಾಗೂ ಶಾಸಕ ದಡೇಸೂಗೂರ್ ನಡುವಿನ ಸಂಭಾಷಣೆ ವೈರಲ್ ಆಗಿದೆ. ಕೆಲಸವೂ ಮಾಡಿಕೊಡದೆ ಹಣವನ್ನೂ ಕೊಡದೆ ಶಾಸಕರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ತನಿಖೆಗೆ ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಆದರೆ ಬಸವರಾಜ್ ದಡೇಸೂಗೂರ್ ಮಾತ್ರ, ಆಡಿಯೋದ ಧ್ವನಿ ನನ್ನದೇ. ಆದ್ರೆ ನಾನು ಹಣ ಪಡೆದಿಲ್ಲ. ಪ್ರಕರಣದ ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತಾಡಿದ್ರು ಅಷ್ಟೇ ಎಂದು ಪೂರ್ಣ ಮಾಹಿತಿ ನೀಡೋಕೆ ನಿರಾಕರಿಸಿದ್ದಾರೆ. ಇದನ್ನೂ ಓದಿ: ಸ್ವರೂಪ್‍ಗೆ ಟಿಕೆಟ್ ನೀಡುವಂತೆ ಒತ್ತಾಯ – ಕಾರ್ಯಕರ್ತರನ್ನು ಎದ್ದು ಹೋಗಿ ಎಂದು ಕೆಂಡಾಮಂಡಲವಾದ ರೇವಣ್ಣ

Live Tv

Leave a Reply

Your email address will not be published. Required fields are marked *

Back to top button